ದುಬೈನಲ್ಲಿ ಕನ್ನಡ ಭವನ ಮತ್ತು ಕಲಿಕೆಗೆ ಸಮರ್ಥನೆ ವ್ಯಕ್ತಪಡಿಸಿದ ಕನ್ನಡ ಸಾಹಿತ್ಯ ಪರಿಷತ್ತು
ದುಬೈ:ಕನ್ನಡ ಮಿತ್ರರು ಯು ಎ ಯಿ ದುಬೈನಲ್ಲಿ ನಡಸುತ್ತಿರುವ ಕನ್ನಡ ಪಾಠ ಶಾಲೆ ದುಬೈನ ಮಹಾ ಪೋಷಕರಾದ ಶ್ರೀಯುತ ಪ್ರವೀಣ್ ಕುಮಾರ್ ಶೆಟ್ಟಿ, ಅಧ್ಯಕ್ಷರಾದ ಶ್ರೀಯುತ ಶಶಿಧರ್ ನಾಗರಾಜಪ್ಪ,ಉಪಾದ್ಯಕ್ಷ ಶ್ರೀಯುತ ಸಿದ್ದಲಿಂಗೇಶ್, ಕಾರ್ಯದರ್ಶಿ ಶ್ರೀಯುತ ಗವಸ್ಕರ್, ಖಜಾಂಚಿ ನಾಗರಾಜ್ ರಾವ್ ಸಂಸ್ಥಾಪಕ ಸದಸ್ಯ, ಚಂದ್ರಶೇಖರ್ ಸಂಕೋಲೆ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಮಹೇಶ್ ಜೋಷಿ ಅವರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಮನವಿಯಲ್ಲಿ ಮುಖ್ಯವಾಗಿ ಕನ್ನಡ ಭಾಷಾ ಪ್ರಮಾಣ ಪತ್ರ, ಶಿಕ್ಷಕಿಯರ ತರಬೇತಿ, ಕನ್ನಡ ಭವನ ನಿರ್ಮಾಣದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಕ ಸಾ ಪ ಅಧ್ಯಕ್ಷರಾದ ಶ್ರೀಯುತ ಜೋಶಿ ಅವರು ಬೇಡಿಕೆ ಧನಾತ್ಮಕವಾಗಿ ಸ್ಪಂದಿಸಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಭರವಸೆ ನೀಡಿದರು.
ಕ ಸಾ ಪ ದ ಬೆಂಗಳೂರಿನ ಕಛೇರಿ ಯಲ್ಲಿ ನಡೆದ ಸೌಹಾರ್ದ ಭೇಟಿಯಲ್ಲಿ ಶ್ರೀ ಮಹೇಶ್ ಜೋಶಿಯವರು ದುಬಾಯಿ ಇಂದ ಬಂದ ತಂಡಕ್ಕೆ ಕ ಸ ಪ ದ ಅನೇಕ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿ ಅನಿವಾಸಿ ಕನ್ನಡಿಗರನ್ನು ಒಂದು ವೇದಿಕೆಗೆ ತರುವ ತಮ್ಮ ಯೋಜನೆಗಳನ್ನು ವಿವರಿಸಿದರು .