ಬಂಟ್ವಾಳ: ಸಾಮಾಜಿಕ ಪರಿವರ್ತನೆಯ ಕಾಲಘಟ್ಟದಲ್ಲಿ ನಾವು ಇದ್ದೇವೆ. ದೀನ ದುರ್ಬಲರಿಗೆ, ಮಹಿಳೆಯರಿಗೆ ಇಂದು ಅವಕಾಶವು ತೆರೆದುಕೊಳ್ಳುತ್ತಿದ್ದು ಪರಿಸ್ಥಿತಿಗೆ ಪೂರಕವಾಗಿ ನಡೆದುಕೊಳ್ಳುವುದು ಕಾಲಧರ್ಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ನ. 24ರಂದು ಸಜೀಪಮೂಡ ಗ್ರಾ.ಪಂ. ವಠಾರದಲ್ಲಿ ಭಾರತ್ ನಿರ್ಮಾಣ್  ರಾಜೀವ ಗಾಂ ಸೇವಾ ಕೇಂದ್ರ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಾವು ವರ್ತಮಾನ ಕಾಲದಲ್ಲಿ ಭೂತಕಾಲದ ವಿಚಾರಗಳಿಂದ ಪಾಠ ಕಲಿಯಬೇಕು. ಸತ್ಯವನ್ನು ಸತ್ಯವೆಂದೇ ಹೇಳಬೇಕು. ಕೇವಲ ಚಪ್ಪಾಳೆ ಗಿಟ್ಟಿಸುವ ಉದ್ದೇಶದ ಮಾತುಗಳು ನನಗೆ ಬೇಕಾಗಿಲ್ಲ ಎಂದು ನುಡಿದರು.
ಜಿ. ಪಂ. ಅಧ್ಯಕ್ಷ ಆಶಾ ತಿಮ್ಮಪ್ಪ ಗೌಡ ಮಾತನಾಡಿ ಎಲ್ಲರೂ ಒಟ್ಟಾಗಿ ಸೇವೆ ಸಲ್ಲಿಸಿದರೆ ನಮ್ಮ ಊರು ಅಭಿವೃದ್ದಿ ಆಗುತ್ತದೆ. ಜನ ಸಾಮಾನ್ಯರು ಸರಕಾರದ ಕಾರ್ಯಕ್ರಮದಲ್ಲಿ ಭಾಗಿಗಳಾಗಬೇಕು. ಇದರಿಂದ ಉತ್ತಮ ಕೆಲಸಗಳು ಸುಲಭ ಆಗುವುದು.
ಜಿಲ್ಲಾ ಉಸ್ತುವಾರಿ ಸಚಿವರು ಕುಡಿಯುವ ನೀರಿನ ಉದ್ದೇಶಕ್ಕೆ ಪ್ರಸ್ತುತ ವರ್ಷದಲ್ಲಿ ವಿಶೇಷ ಅನುದಾನ ಮಂಜೂರಾತಿ ನೀಡಬೇಕು. ಕಳೆದ ಎರಡು ವರ್ಷಗಳ ಹಿಂದಿನ ಆಡಳಿತವು ಮಂಜೂರು ಮಾಡಿದ ಕೆಲಸದ ಅನುದಾನ ಇನ್ನೂ ಬರಬೇಕು ಎಂದು ನುಡಿದರು.
ವೇದಿಕೆಯಿಂದ ಮಾತನಾಡಿದ ಜಿ.ಪಂ. ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿ ರಾಜಕೀಯ ಕ್ಷೇತ್ರದಲ್ಲಿ ಯಾವುದು ಅಸಂಭವವಲ್ಲ. ದೂರುವವರು, ಟೀಕಿಸುವವರು, ದಿಕ್ಕಾರ ಕೂಗುವವರು ಇರುತ್ತಾರೆ. ನಮ್ಮ ಕರ್ತವ್ಯವನ್ನು ನಾವು ಮಾಡುವುದನ್ನು ಬಿಡಲಾಗದು ಎಂದು ವಿವರಿಸಿದರು.

sajiapanadu
ಪ ಜಿ.ಪಂ. ಮಾಜಿ ಅಧ್ಯಕ್ಷ, ಹಿರಿಯ ನೇತಾರ ಬರಂಗರೆ ಸದಾನಂದ ಪೂಂಜ ಪ್ರಸ್ತಾವನೆ ನೀಡಿ ಮಾತನಾಡುತ್ತಾ ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ಬಲಪಡಿಸುವ ಕೆಲಸ ಆಗಬೇಕು. ಮೂಲಭೂತ ಸೌಕರ್ಯಗಳನ್ನು ಇನ್ನಷ್ಟು ಅಭಿವೃದ್ದಿಯ ದೃಷ್ಟಿಯಲ್ಲಿ ಇರಿಸಿಕೊಂಡು ಪೂರೈಸಬೇಕು. ಎಲ್ಲರನ್ನೂ ಒಳಗೊಂಡಂತೆ ಸಮಾಜದಲ್ಲಿ ನೆಮ್ಮದಿಯ ವಾತಾವರಣ ಇರುವುದಕ್ಕೆ ಸ್ಥಳೀಯ ಆಡಳಿತಕ್ಕೆ ಗರಿಷ್ಟ ಅನುದಾನ ಒದಗಿಸುವ ಕೆಲಸ ಆಗಬೇಕು ಎಂದು ಮನವಿ ಮಾಡಿದರು.
ತಾ.ಪಂ. ಅಧ್ಯಕ್ಷ ಯಶವಂತ ಡಿ. ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಟ್ಟಡ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಇಕ್ಬಾಲ್ ಅವರನ್ನು ಸಮ್ಮಾನಿಸಲಾಯಿತು.
ವೇದಿಕೆಯಲ್ಲಿ ತಾ.ಪಂ. ಸದಸ್ಯರಾದ ಪುಷ್ಪಾವತಿ, ಶರೀಫ್, ಜಿ.ಪಂ. ಮಾಜಿ ಸದಸ್ಯೆ ವಿಜಯ ವಿ. ಪ್ರಭು, ಸಜೀಪಮೂಡ ಗ್ರಾ.ಪಂ. ಅಧ್ಯಕ್ಷೆ ಸುಂದರಿ, ಸಜೀಪಮುನ್ನೂರು ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ, ಪಾಣೆಮಂಗಳೂ ರೈ. ಸೇ.ಸ. ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಅದ್ರುಕ್ಕು, ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ತಾ.ಪಂ. ಕಾರ್ಯನಿವರ್ಾಹಣಾಕಾರಿ ಸಿಪ್ರಿಯನ್ ಮಿರಾಂದ, ಜಿ.ಪಂ. ಇಂಜಿನಿಯರ್ ಗಿರೀಶ್ ಕೆ.ಪಿ.
ಉಪಾಧ್ಯಕ್ಷೆ ಗೀತಾ ಜಾಡಕೋಡಿ, ಸದಸ್ಯರಾದ ಅಬ್ದುಲ್ ಕರೀಂ, ಎನ್. ಚಂದ್ರಶೇಖರ ಶೆಟ್ಟಿ ನೀಲ್ಯ, ಸುಶೀಲಾ ಕಂದೂರು, ಯೋಗೀಶ್ ಬೆಳ್ಚಡ ಕೂಡೂರು, ಬಿ.ಎಸ್.ಅಬೂಬಕ್ಕರ್ ಬೊಳ್ಳಾಯಿ, ಕೆ. ಬಶೀರ್ ಕೊಳಕೆ, ಸಂಜೀವಿ ಕೇಪುಳಗುಡ್ಡೆ, ಗೀತಾಚಂಚಲಕ್ಷಾ ಮಿತ್ತಕೆರೆ, ಯಮುನಾ ಕೊಟ್ಟಾರಿಪಾಲು, ಯೋಗೀಶ ಪೂಜಾರಿ ಕೋಮಾಲಿ, ಲವಿನಾ ಲಸ್ರಾದೊ ಕೊಳಕೆ, ವಿಶ್ವನಾಥ ಬೆಳ್ಚಡ ಕೂಡೂರು, ಸುರೇಶ್ ಶೆಟ್ಟಿ ಕೊಯಮಜಲು, ಅಭಿವೃದ್ದಿ ಅಕಾರಿ ನಿರ್ಮಲ, ಕಾರ್ಯದಶರ್ಿ ನಳಿನ್ ಎ.ಕೆ. ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.
ಸಜೀಪಮೂಡ ಗ್ರಾ.ಪಂ.ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜ ಸ್ವಾಗತಿಸಿದರು. ಬಿ.ಎ. ಉಮರಬ್ಬ ಬೊಳ್ಳಾಯಿ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.
2411ಚಿಠಿಛಿಟಜ5

 

By suddi9

Leave a Reply

Your email address will not be published. Required fields are marked *