ಬಿ.ಸಿ.ರೋಡು: ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ
ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಇದೇ ೨೨ರಿಂದ ೨೮ರತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ಸಂಜೆ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಕೈಕಂಬ ಪೊಳಲಿ ದ್ವಾರ ಬಳಿ ಹೊರಟ ಆಕರ್ಷಕ ಹೊರೆಕಾಣಿಕೆ ಮೆರವಣಿಗೆಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ ಮಲ್ಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ ಮತ್ತಿತರ ಗಣ್ಯರು ಚಾಲನೆ ನೀಡಿದರು.
ಈ ಮೆರವಣಿಗೆಯಲ್ಲಿ ಕೀಲು ಕುದುರೆ, ಗೊಂಬೆ ಕುಣಿತ, ಹುಲಿವೇಷ, ಕೊಂಬು, ಚೆಂಡೆ, ವಾದ್ಯ ಸಹಿತ ಸಾಲು ಸಾಲು ಸಮವಸ್ತçಧಾರಿ ಮಹಿಳೆಯರು ಸೇರಿದಂತೆ ಅಪಾರ ಮಂದಿ ಪಾಲ್ಗೊಂಡು ಗಮನ ಸೆಳೆದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ ಮಲ್ಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಗೌರವಾಧ್ಯಕ್ಷ ತಿಮ್ಮಪ್ಪ ರೈ ಏರಿಮಾರ್, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಪ್ರಮುಖರಾದ ಬಿ.ವಿಶ್ವನಾಥ ಪೂಜಾರಿ, ಜಯರಾಮ ಶೆಟ್ಟಿ, ಸದಾಶಿವ ನಾಯಕ್, ಇಂದಿರೇಶ್, ಸದಾನಂದ ಶೆಟ್ಟಿ ರಂಗೋಲಿ, ಚರಣ್ ಜುಮಾದಿಗುಡ್ಡೆ, ಮಂಜುನಾಥ ಪೈ, ಐತಪ್ಪ ಆಳ್ವ, ಬಿ.ರಾಮಚಂದ್ರ ರಾವ್, ಐತಪ್ಪ ಪೂಜಾರಿ, ಎಚ್.ಸಂಕಪ್ಪ ಶೆಟ್ಟಿ, ಚಿತ್ತರಂಜನ್ ಶೆಟ್ಟಿ ಮತ್ತಿತರರು ಇದ್ದರು.