Published On: Fri, Feb 17th, 2023

ಫೆ. ೧೮ಕ್ಕೆ ಮಾಣಿಯಲ್ಲಿ ಸುನ್ನಿ ಸಮಾವೇಶ

ಬಂಟ್ವಾಳ: ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟ ವತಿಯಿಂದ ದಕ್ಷಿಣ ಭಾರತದ ಪ್ರಸಿದ್ದ ವಿದ್ಯ ಕೇಂದ್ರ ಕಲ್ಲಿಕೋಟೆಯ ಜಾಮಿಯಾ ದಾರುಸ್ಸಲಾಮ್ ನಂದಿ‌ಇದರ 47 ವಾರ್ಷಿಕ 15 ನೇ  ಘಟಿಕೋತ್ಸವ ಫೆ.24 ರಿಂದ 26 ರವರೆಗೆ ನಡೆಯುವ ಹಿನ್ನಲೆಯಲ್ಲಿ ಬೃಹತ್ ಮಿಹ್ರಾಜ್ ಮಜ್ಲಿಸ್,ಸುನ್ನಿ ಸಮಾವೇಶ ಕಾರ್ಯಕ್ರಮವು ಫೆ.18 ರಂದುಮಾಣಿ ಜನಪ್ರಿಯ ಮೈದಾನದಲ್ಲಿ ಜರಗಲಿದೆ ಎಂದು ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಬಿ.ಮುಹಮ್ಮದ್ ದಾರಿಮಿ ಹೇಳಿದ್ದಾರೆ.


ಗುರುವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು ಸಮಾವೇಶವು ವೈವಿಧ್ಯಪೂರ್ಣವಾಗಿ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಪ್ರಚಾರ ಕಾರ್ಯವು ರಾಜ್ಯಾದ್ಯಂತ ನಡೆಯುತ್ತಿದೆ ಎಂದರು. ಅಂದು ಸಂಜೆ ಜನಪ್ರಿಯ ಗಾರ್ಡನ್‌ ನ ಹಾಜಿ ಇಸ್ಮಾಯಿಲ್ ರವರು ಧ್ವಜಾರೋಹಣ ಗೈಯ್ಯಲಿದ್ದಾರೆ.  ಸಮಸ್ತ ಪ್ರ. ಕಾರ್ಯದರ್ಶಿ ಶೈಖುಲ್  ಜಾಮಿಯಾ ಆಲಿಕುಟ್ಟಿ ‌ ದುವಾ ನೆರವೇರಿಸಿ, ಆಶೀರ್ವಚನ ನೀಡಲಿದ್ದಾರೆ. ಖಾಜಿ ತ್ವಾಕಾ ಆಹ್ಮದ್  ಮುಸ್ಲಿಯಾರ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಶಾಸಕರು ಸಹಿತ ಹಲವಾರು ಗಣ್ಯರು  ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.


ಈ ವರ್ಷ ಸನದು ಪಡೆಯುವ ಯುವ ದಾರಿಮಿಗಳನ್ನು ಸಭೆಯಲ್ಲಿ ಸನ್ಮಾನಿಸಲಾಗುವುದು. ಎಂದ ಅವರು ದಾರಿಮಿ ಉಲಮಾಗಳು ಜಿಲ್ಲೆಯ ಅತ್ಯಧಿಕ ಮೊಹಲ್ಲಾಗಳಲ್ಲಿ ಖತೀಬ್‌, ಮುದರ್ರಿಸ್, ಮುಂತಾದ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಧಾರ್ಮಿಕ ಚಟುವಟಿಕೆಗಳ ಹೊರತಾಗಿ ಸಾಮಾಜಿಕ ಕಳಕಳಿಯೊಂದಿಗೆ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂದರು. ಸಮಿತಿ ಪದಾಧಿಕಾರಿಗಳಾದ  ಎಲ್ .ಟಿ .ರಝಾಕ್ ,ಕೆ.ಎಲ್ .ಉಮರ್ ದಾರಿಮಿ,ಕೆ.ಬಿ.ಖಾದರ್ ದಾರಿಮಿ,ತಬೂಕ್ ಅಬ್ದರ್ರಹ್ಮಾನ್ ದಾರಿಮಿ ಮೊದಲಾದವರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter