ಬಂಟ್ವಾಳ: ಮಂಚಿ ಕುಕ್ಕಾಜೆ ಹಾಲು ಉತ್ಪಾದಕರ ಸಹಕಾರಿ ಸಂಘ ನಿ.ದ ಕಾರ್ಯದರ್ಶಿಯಾಗಿ ೩೬ ವರ್ಷಗಳ  ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ  ಎನ್ ಕೇಶವರಾವ್ ಇವರನ್ನು ಸನ್ಮಾನಿಸಿ ಹೃದಯಸ್ಪರ್ಶಿಯಾಗಿ ಬೀಳ್ಕೋಡುವ ಕಾರ್ಯಕ್ರಮ ಕುಕ್ಕಾಜೆ ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರದಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ. ಮುರಳೀಧರ ಆಳ್ವ ಅವರು ವಹಿಸಿದ್ದರು.  ದ.ಕ. ಹಾಲು ಒಕ್ಕೂಟದ ಅಧ್ಯಕ್ಷರಾದ  ಕೆ.ಪಿ ಸುಚರಿತ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.  ಗಣೇಶ್ ಐತಾಳ್ ಇವರು  ಅಭಿನಂದನಾ ಮಾತುಗಳನ್ನಾಡಿದರು.

     ದ.ಕ.ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಬಿ. ಸುಧಾಕರ ರೈ, ಸುಭದ್ರಾ ರಾವ್ , ಸವಿತಾ ಎನ್ ಶೆಟ್ಟಿ ,ವ್ಯವಸ್ಥಾಪಕರಾದ ಡಾ. ನಿತ್ಯಾನಂದ, ಡಾ. ಟಿ.ವಿ ಶ್ರೀನಿವಾಸ್,  ಮಂಚಿ ಗ್ರಾ.ಪಂ.ಅಧ್ಯಕ್ಷೆ  ಪುಷ್ಪಾ ಎಸ್ ಕಾಮತ್  ಮುಖ್ಯ ಅತಿಥಿಗಳಾಗಿ  ಭಾಗವಹಿಸಿ ಶುಭಹಾರೈಸಿದರು. ಸಂಘದ ನಿರ್ದೇಶಕರಾದ ನಿಶ್ಚಿಲ್ ಜಿ. ಶೆಟ್ಟಿ ಸ್ವಾಗತಿಸಿ, ನಿರ್ದೇಶಕ ರಮೇಶ್ ರಾವ್. ಎನ್ ವಂದಿಸಿದರು. ಪುಷ್ಪರಾಜ್ ಕೆ. ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *