ಮಾಣಿ ಉಳ್ಳಾಲ್ತಿ ದೈವಸ್ಥಾನಕ್ಕೆ ಸಂಪರ್ಕ ರಸ್ತೆ
ಬಂಟ್ವಾಳ: ಐತಿಹಾಸಿಕ ಹಿನ್ನಲೆಯ ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಗೆ ಸಾವಿರಾರು ಮಂದಿ ಭಕ್ತರು ಸೇರುತ್ತಾರೆ. ಸೋಮವಾರವು (ಫೆ.6) ಇಲ್ಲಿನ ಮೆಚ್ಚಿ ಜಾತ್ರೆ ಸಾವಿರಾರು ಭಕ್ತರ ಸಂಭ್ರಮ,ಸಡಗರದಲ್ಲಿ ಸಂಪನ್ನಗೊಂಡಿತು. ಕಳೆದ ವರ್ಷ ಶ್ರೀ ಕ್ಷೇತ್ರಕ್ಕಾಗಮಿಸುವ ವೇಳೆ ಇಲ್ಲಿನ ಸಂಪರ್ಕ ರಸ್ತೆ ಹೇಗಿತ್ತು,ಈ ವರ್ಷದ ಮೆಚ್ಚಿ ಜಾತ್ರೆಗೆ ರಸ್ತೆಯ ಚಿತ್ರಣ ಹೇಗಾಗಿದೆ ಗೊತ್ತ..!

ಶಾಸಕರ ಸಂಕಲ್ಪ:
ಜಾತ್ರೆಯ ಸಂದರ್ಭದಲ್ಲಿ ಅಗಮಿಸುವ ಭಕ್ತರಿಗೆ ಸಮರ್ಪಕವಾದ ರಸ್ತೆಯಿಲ್ಲದೆ ಸುಗಮ ಸಂಚಾರಕ್ಕೆ ಅನಾನುಕೂಲವಾಗುತಿತ್ತಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದರು. ಕಳೆದ ವರ್ಷ ಶಾಸಕ ರಾಜೇಶ್ ನಾಯ್ಕ್ ಅವರು ಮೆಚ್ಚಿ ಜಾತ್ರೆಗೆ ಬಂದಾಗ ಈ ರಸ್ತೆಯಲ್ಲಾಗುತ್ತಿದ್ದ ಅಡಚಣೆ,ತೊಂದರೆಯನ್ನು ಗಮನಿಸಿ 2023 ರಲ್ಲಿ ನಡೆಯುವ ಕಾಲಾವಧಿ ಜಾತ್ರೆಯ ವೇಳೆ ಸುಸಜ್ಜಿತ ಕಾಂಕ್ರೆಟ್ ರಸ್ತೆ ನಿರ್ಮಿಸಿಕೊಡುವ ಸಂಕಲ್ಪವನ್ನು ಕ್ಷೇತ್ರದಲ್ಲೇ ಮಾಡಿದ್ದರು.
2 ಕೊ.ರೂ.ವೆಚ್ಚದ ರಸ್ತೆ ನಿರ್ಮಾಣ:
ತಮ್ಮ ಸಂಕಲ್ಪದಂತೆ ಕಾರ್ಯ ಪ್ರವೃತರಾದ
ಶಾಸಕ ರಾಜೇಶ್ ನಾಯ್ಕ್ ಅವರ ವಿಶೇಷ ಮುತುವರ್ಜಿ ವಹಿಸಿ ಉಳ್ಳಾಲ್ತಿ ದೈವಸ್ಥಾನ ರಸ್ತೆಗೆ 2 ಕೋ.ರು.ಅನುದಾನವನ್ನು ಮಂಜೂರು ಗೊಳಿಸಿದರು.
ಎರಡು ತಿಂಗಳ ಹಿಂದೆಯಷ್ಠೆ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿತ್ತು.ಬಳಿಕ ಲೋಕೋಪಯೋಗಿ ಇಲಾಖೆಯ ಮೂಲಕ ರಸ್ತೆ ಕಾಮಗಾರಿಯನ್ನು ಆರಂಭಿಸಲಾಗಿತ್ತು.ಇದೀಗ ಫೆ.6 ರಂದು ಈ ವರ್ಷದ ಮೆಚ್ಚಿ ಜಾತ್ರೆಗೆ ಸುಂದರ,ಮಾದರಿಯಾದ ಕಾಂಕ್ರೆಟ್ ರಸ್ತೆಯು ನಿರ್ಮಾಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಕೋಡಾಜೆ ಕ್ರಾಸ್ ನಿಂದ ಶ್ರೀ ಉಳ್ಳಾಲ್ತಿ ದೈವಸ್ಥಾನದ ವರೆಗಿನ ಈ ರಸ್ತೆ ಸುಮಾರು 650 ಮೀ.ಉದ್ದವಿದ್ದು,ಏಕಕಾಲದಲ್ಲಿ ಎರಡುವಾಹನಗಳು ಎದುರು,ಬದರಾಗಿ ಸಂಚರಿಸುವಂತೆ ಐದೂವರೆ ಮೀ.ಅಗಲದಲ್ಲಿ ನಿರ್ಮಾಣಗೊಂಡಿದೆ.ಆದೇರೀತಿ ರಸ್ತೆ ಬದಿ ಇಂಟರ್ ಲಾಕ್ ಅಳವಡಿಸಿ ಪುಟ್ ಪಾತ್ ನಿರ್ಮಿಸಿ ಪಾದಚಾರಿಗಳಿಗೆ ನಡೆದಾಡಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ.ಈ ಕಾಮಗಾರಿ ಪ್ರಗತಿಯಲ್ಲಿದೆ. ದೈವಸ್ಥಾನದ ಹೊರಾಂಗಣಕ್ಕು ಶಾಸಕ ರಾಜೇಶ್ ನಾಯ್ಕ್ ಅವರ ಮುತುವರ್ಜಿಯಿಂದ ಇಂಟರ್ ಲಾಕ್ ಕೂಡ ಅಳವಡಿಸಲಾಗಿದೆ.ಹಾಗೆಯೇ ಹೈಮಾಸ್ಕ್ ದೀಪವನ್ನು ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ.ಈಗಾಗಲೇ ಶೇ.95 ಭಾಗ ಕಾಮಗಾರಿ ಪೂರ್ಣಗೊಂಡಿದ್ದು, ಶೇ.95 ಕಾಮಗಾರಿ ಪೂರ್ಣಗೊಂಡಿದ್ದು,ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಯಾಗಲಿದೆ.

ಶಾಸಕ ರಾಜೇಶ್ ನಾಯ್ಕ ಅವರು ಧಾರ್ಮಿಕ ಕೇಂದ್ರಗಳಿಗೆ ಸಂಪರ್ಕ ರಸ್ತೆ ಮತ್ತು ಮೂಲಭೂತ ಸೌಲಭ್ಯವನ್ನು ಪೂರೈಸಲು ಅದ್ಯತೆ ನೀಡಿದ್ದಾರೆ.ಅದರಂತೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 230 ಕ್ಕು ಅಧಿಕ ದೇವಸ್ಥಾನ, ದೈವಸ್ಥಾನ,ಮಂದಿರಗಳಿಗೆ ಸಂಪರ್ಕ ರಸ್ತೆ,ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದಾರೆ.ಅದರ ಭಾಗವಾಗಿ ಮಾಣಿ ಉಳ್ಳಾಲ್ತಿ ದೇವಸ್ಥಾನ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ರೂಪಿಸುವ ಸಂಕಲ್ಪದಂತೆ ಸುಮಾರು ಎರಡು ಕೋಟಿ ರೂ.ವೆಚ್ಚದಲ್ಲಿ ಕಾಂಕ್ರೆಟ್ ರಸ್ತೆ ನಿರ್ಮಾಣಗೊಂಡಿದ್ದು,ಈ ವರ್ಷದ ಜಾತ್ರೆಗೆ ಬಂದ ಭಕ್ತರು ಅತ್ಯಂತ ಸಂತಸ ಪಟ್ಟಿದ್ದಾರಲ್ಲದೆ ಶಾಸಕರಿಗೂ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ. ಭಕ್ತರ ಸುಗಮ ಸಂಚಾರಕ್ಕೆ ಸುಂದರವಾದ ರಸ್ತೆ ನಿರ್ಮಿಸಿಕೊಟ್ಟ ಶಾಸಕರಿಗೆ ಅಭಿನಂದನೆ ಸಲ್ಲಿಸಿ ಅಲ್ಲಲ್ಲಿ ಪ್ಲೆಕ್ಸ್ ಗಳು ರಾರಾಜಿಸುತ್ತಿವೆ.
ಶಾಸಕರ ಭೇಟಿ
ಮೆಚ್ಚಿ ಜಾತ್ರೆಗೆ ಬಂದಿದ್ದ ಶಾಸಕ ರಾಜೇಶ್ ನಾಯ್ಕ್ ಅವರನ್ನು ಪಕ್ಷದ ಸ್ಥಳೀಯ ನಾಯಕರು, ಕಾರ್ಯಕರ್ತರು ಹಾಗೂ ಕ್ಷೇತ್ರದ ವತಿಯಿಂದಲು ಗೌರವಿಸಲಾಯಿತು.
ಸಂಚಾರದಲ್ಲಿ ಯಾವುದೇ ಅಡಚಣೆಯಿಲ್ಲದೆ ಸರಾಗವಾಗಿ ಕ್ಷೇತ್ರಕ್ಕೆ ಬಂದು ದೇವರದರ್ಶನ ಪಡೆದು ನಿರಾಳವಾಗಿ ತೆರಳುತ್ತಿದ್ದದು ಕಂಡುಬಂತು.ಸೋಮವಾರ ಮೆಚ್ಚಿ ಜಾತ್ರೆಗೆ ಬಂದಿದ್ದ ಶಾಸಕ ರಾಜೇಶ್ ನಾಯ್ಕ್ ಸುಂದರವಾಗಿ ನಿರ್ಮಾಣವಾದ ಕಾಂಕ್ರೆಟ್ ರಸ್ತೆಯನ್ನು ಪರಿಶೀಲಿಸಿ ಸಂತಸ ವ್ಯಕ್ತಪಡಿಸಿದರು.ತಾನು ಮಾಡಿದ್ದ ಸಂಕಲ್ಪ ಈಡೇರಿದಕ್ಕಾಗಿ ತೃಪ್ತಿ ಪಟ್ಟರು.ಸ್ಥಳೀಯ ನಾಯಕರು,ಕಾರ್ಯಕರ್ತರು ಮಾತ್ರವಲ್ಲ ಭಕ್ತರು ಕೂಡ ಅತ್ಯಂತ ಖುಷಿ ಪಟ್ಟಿದ್ದಾರೆ.ಈ ಸಂದರ್ಭ ಸ್ಥಳೀಯ ಪ್ರಮುಖರಾದ ಪುಷ್ಪರಾಜ್ ಶೆಟ್ಟಿ,ಗಣೇಶ್ ರೈ ಮಾಣಿ, ಮೋಹನ್ ಪಿ.ಎಸ್.,ಸಂದೇಶ್ ಶೆಟ್ಟಿ ಮೊದಲಾದವರಿದ್ದರು.
ನುಡಿದಂತೆ ನಡೆದ ಶಾಸಕರು:
ಕಳೆದ ವರ್ಷ ಮೆಚ್ಚಿ ಜಾತ್ರೆಗಾಗಮಿಸಿದ್ದ ಶಾಸಕ ರಾಜೇಶ್ ನಾಯ್ಕ್ ಅವರು ಕ್ಷೇತ್ರದ ಸಂಪರ್ಕ ರಸ್ತೆಯ ಅವ್ಯವಸ್ಥೆ,ಜನರು ಪರದಾಡುವುದನ್ನು ಕಂಡು ಈ ವರ್ಷ ಜಾತ್ರೆ ಸಂದರ್ಭ ಕಾಂಕ್ರೆಟ್ ರಸ್ತೆ ನಿರ್ಮಿಸಿಕೊಡುವ ಸಂಕಲ್ಪ ತೊಟ್ಟಿದ್ದರು.ಅದರಂತೆ ಇಲ್ಲಿಗಾಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ಎರಡು ಕೋಟಿ ರೂ.ವೆಚ್ಚದಲ್ಲಿ ಮಾದರಿಯಾದ ರಸ್ತೆ ನಿರ್ಮಿಸಿಕೊಟ್ಟು ನುಡಿದಂತೆ ನಡೆದಿದ್ದಾರೆ.ಈಗಾಗಲೇ ಶೇ.95 ಭಾಗ ಕಾಮಗಾರಿ ಪೂರ್ಣ ಗೊಂಡಿದೆ.ಶಾಸಕರ ಈ ಕಾರ್ಯಕ್ಕೆ ಭಕ್ತರು ಸಂತಸ ಪಟ್ಟಿದ್ದು,ಕ್ಷೇತ್ರದ ಪರವಾಗಿ ಶಾಸಕರು ಹಾಗೂ ಸಹಕರಿಸಿದ ಸ್ಥಳೀಯ ನಾಯಕರಿಗೂ ಅಭಿನಂದನೆಗಳು
ಸಚಿನ್ ರೈ ಮಾಣಿಗುತ್ತು
ಆಡಳಿತ ಮೊಕ್ತೇಸರರು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ