ಕುಂಡಡ್ಕ: ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ”ದ ಉದ್ಘಾಟನೆ
ಬಂಟ್ವಾಳ: ಸಮಾಜದ ಕಟ್ಟ ಕಡೆಯ ಮಗುವಿಗೂ ಶಿಕ್ಷಣ ದೊರೆಯಬೇಕು, ಯಾವುದೇ ಯೋಜನೆ ಒಂದೇ ಸಮುದಾಯಕ್ಕೆ ಸೀಮಿತ ಮಾಡಲು ಆಗಲ್ಲ, ಸಾಮೂಹಿಕ ನ್ಯಾಯಕ್ಕೆ ಒತ್ತು ಕೊಡುವ ಅಗತ್ಯವಿದೆ ಎಂದು ರಾಜ್ಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರಿನ ಕುಳ ಗ್ರಾಮದ ಬಿಲ್ಲವ ಸಂಘ (ರಿ) ಕುಂಡಡ್ಕ ವತಿಯಿಂದ ಕುಂಡಡ್ಕ ಗುರುನಗರ ಎಂಬಲ್ಲಿ ನೂತನವಾಗಿ ನಿರ್ಮಿಸಲಾದ “ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ”ದ ಉದ್ಘಾಟನೆಗೈದು ಮಾತನಾಡಿದ ಅವರು,ಮುಂದಿನ ಬಜೆಟಿನಲ್ಲಿ ನಾರಾಯಣ ಗುರು ನಿಗಮ ಘೋಷಣೆಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನಗೈದ ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಅವರು ಆಶೀರ್ವಚನಗೈದು ಪ್ರಸ್ತುತಕಾಲಘಟ್ಟದಲ್ಲಿ ಮಕ್ಕಳಿಗೆ ಧರ್ಮ ಶಿಕ್ಷಣ ನೀಡುವ ಅಗತ್ಯ ಇದೆ, ಬಿಲ್ಲವರು ತಮ್ಮಳೊಗಿನ ಭಿನ್ನಾಭಿಪ್ರಾಯವನ್ನು ಬಿಟ್ಟು ಒಗ್ಗಟಾಗಿರಬೇಕು ಎಂದರು.ಕುಂಡಡ್ಕ ಬಿಲ್ಲವ ಸಂಘದ ಅಧ್ಯಕ್ಷ ದೂಮಪ್ಪ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ, ದೈವ ನರ್ಥಕ ರಾಮಣ್ಣ ಕುಳ, ಸಭಾಭವನಕ್ಕೆ ಸ್ಥಳ ದಾನಗೈದ ಸಂಜೀವ ಪೂಜಾರಿ ದಂಪತಿಗಳನ್ನು, ಕಟ್ಟಡ ಸಮಿತಿಯ ಸಂಚಾಲಕರಾದ ಯತೀಶ್ ಪೂಜಾರಿ ದಂಪತಿಗಳನ್ನು ಗೌರವಿಸಲಾಯಿತು
ಮುರುವ ಮಾಣಿಲ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗೂರೂಜಿ,
.ಪುತ್ತೂರು ಶಾಸಕ ಸಂಜೀವ ಮಠಂದೂರು, ಕರ್ನಾಟಕ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ,ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಕೋಶಾಧಿಕಾರಿ ಪದ್ಮರಾಜ್ ಆರ್., ಲಯನ್ಸ್ ಜಿಲ್ಲಾ ಪೂರ್ವ ರಾಜ್ಯಪಾಲರಾದ ಲ.ಡಾ. ಗೀತಪ್ರಕಾಶ್ ಎ,ಯುವ ವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಡಾ. ರಾಜಾರಾಮ್ ಕೆ ಬಿ , ಉದ್ಯಮಿ ರಾಧಾಕೃಷ್ಣ ಪೈ, ದ. ಕ, ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಕೆ. ಸಂಜೀವ ಪೂಜಾರಿ, ಶ್ರೀ.ಕ್ಷೇ.ಧ.ಗ್ರಾ.ಯೋ.ವಿಟ್ಲ ಘಟಕದ ಯೋಜನಾಧಿಕಾರಿ ಚನ್ನಪ್ಪ ಗೌಡ,
ಉಡುಪಿ ಜಿಲ್ಲೆ ಹಿ.ವರ್ಗ ಗಳ ಕಲ್ಯಾಣ ಇಲಾಖಾಧಿಕಾರಿ ಸಚಿನ್ ಕುಮಾರ್ , ಲೋಕೇಶ್ ತಂತ್ರಿಗಳು,ಸಂಜೀವ ಪೂಜಾರಿ, ಕೃಷ್ಣ ಎಂ ಪೂಜಾರಿ, ಸಂತೋಷ್ ಜೀವನ್, ಜಗದೀಶ್ ನಿಂಬಾಳ್ಕರ್, ಮೇಲ್ವಿಚಾರಕರಾದ ಸರಿತಾ ,ಯೋಜನೆಯ ವಿಟ್ಲವಲಯದ ಅಧ್ಯಕ್ಷೆ ಪ್ರಮೀಳ ಮೊದಲಾದವರು ಉಪಸ್ಥಿತರಿದ್ದರು.
ಕುಂಡಡ್ಕ ಬಿಲ್ಲದ ಸಂಘದ ಗೌರವಾಧ್ಯಕ್ಷ ನಾರಾಯಣ ಪೂಜಾರಿ ಎಸ್. ಕೆ.ಪ್ರಸ್ತಾವಿಸಿದರು.
ಸಂಘದ ನಿಕಟಪೂರ್ವ ಅಧ್ಯಕ್ಷ ವಿಠಲ ಪೂಜಾರಿ ಕುಂಡಡ್ಕ ಸ್ವಾಗತಿಸಿದರು, ಕೋಶಾಧಿಕಾರಿ ಕೆ.ಟಿ. ಆನಂದ ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರ್ವಹಿಸಿದರು .