ಅಡ್ಡೂರು : ಎಣ್ಣೆ ಬಾಣಲೆಗೆ
ಹಾರಿ ಬೇಕರಿ ಕಾರ್ಮಿಕ ಆತ್ಮಹತ್ಯೆ
ಕೈಕಂಬ: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರಿನಲ್ಲಿರುವ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಖಾದ್ಯ ತಿಂಡಿ ತಯಾರಿಸುವ ಎಣ್ಣೆ ಬಾಣಲೆಗೆ ಹಾರಿ, ಮೈಯೆಲ್ಲ ಸುಟ್ಟ ಗಾಯಗಳೊಂದಿಗೆ ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ ಬೇಕರಿಯಲ್ಲಿ ನಡೆದಿದೆ.
ಪೊಳಲಿಯ ನಿವಾಸಿ ಪುರಂದರ(೫೦) ಮೃತಪಟ್ಟ ವ್ಯಕ್ತಿಯಾಗಿದ್ದು, ಇವರು ಬೇಕರಿಯಲ್ಲಿ ಕೆಲವು ವರ್ಷದಿಂದ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳಿಂದ ಮಾನಸಿಕವಾಗಿ ಬಳಲಿದವರಂತೆ ಕಂಡು ಬರುತ್ತಿದ್ದ ಇವರು, ಗುರುವಾರ ಮಧ್ಯಾಹ್ನ ಕಾರ್ಮಿಕರು ಬೇಕರಿಯಿಂದ ಹೊರಗಡೆ ಇದ್ದಾಗ ಬಾಗಿಲು ಹಾಕಿ ಉರಿಯುತ್ತಿದ್ದ ಎಣ್ಣೆ ಬಾಣಲೆಗೆ ಹಾರಿದ್ದಾರೆ.
ಮೈಯೆಲ್ಲ ಸುಟ್ಟ ಗಾಯಗಳೊಂದಿಗೆ ಬೊಬ್ಬಿಡುತ್ತಿದ್ದ ಪುರಂದರ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬದುಕುಳಿದಿಲ್ಲ ಎನ್ನಲಾಗಿದೆ.
ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣಗಳು ಇರ‍್ನಷ್ಟೇ ತಿಳಿದು ಬರಬೇಕಿದೆ.