Published On: Wed, Jan 25th, 2023

ಗ್ರಾಮ ವಿಕಾಸ ಯಾತ್ರೆ ಗ್ರಾಮದಡೆಗೆ ಶಾಸಕರ ನಡಿಗೆಯು 12 ನೇ ದಿನದ ಪಾದಯಾತ್ರೆಯು ಮಂಗ್ಲಿಮಾರ್‌ ಶ್ರೀ ಅಣ್ಣಪ್ಪಪಂಜುರ್ಲಿ ದೇವಸ್ಥಾನದಿಂದ ಆರಂಭ

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಿಂದ ಜ.14 ರಂದು ಮಕರಸಂಕ್ರಾಂತಿಯ ಶುಭದಿನದಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದ ಬಂಟ್ವಾಳ ಬಿಜೆಪಿ ವತಿಯಿಂದ ಆರಂಭಗೊಂಡ “ಗ್ರಾಮ ವಿಕಾಸ ಯಾತ್ರೆ” ” ಗ್ರಾಮದೆಡೆಗೆ ಶಾಸಕರ ನಡಿಗೆ” ವಿನೂತನ ಪಾದಯಾತ್ರೆಯ 12 ನೇ ದಿನವಾದ ಇಂದು.ಜ.25 ರಂದು ಬೆಳಿಗ್ಗೆ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಗ್ಲಿಮಾರ್ ಶ್ರೀ ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಿಂದ ಹೊರಟಿತು.


ಜ.24 ರಂದು 11 ನೇ ದಿನದ ಪಾದಯಾತ್ರೆ ಬೆಳಿಗ್ಗೆ ಕರ್ಪೆ ಕುಪ್ಪೆಟ್ಟಿ ಬರ್ಕೆ ಕುಪ್ಪೆಟ್ಟಿ ಪಂಜುರ್ಲಿ ಮೂಲಸ್ಥಾನದಿಂದ ಹೊರಟ ಪಾದಯಾತ್ರೆ ಸಂಜೆ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರಿಯಾಳದಲ್ಲಿ ಸಭಾ ಕಾರ್ಯಕ್ರಮದ ಮೂಲಕ ಸಮಾಪನಗೊಂಡಿತು.


ಶಾಸಕ ರಾಜೇಶ್ ನಾಯ್ಕ್ ಅವರು ಬಿಜೆಪಿ ಕಾರ್ಯಕರ್ತ ನಿವೃತ್ತ ಸೈನಿಕ ಅನಂದ ಡಿ.ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ಇಂದು‌ ಬೆಳಿಗ್ಗೆ ನೂರಾರು ಕಾರ್ಯಕರ್ತರ ಜೊತೆಗೆ ಅಮ್ಟಾಡಿ ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ , ವಂದೆ ಮಾತರಂ ಗೀತೆ ಹಾಡಿದ ಬಳಿಕ ಭೂಮಿಗೆ ನಮಿಸಿ ಕಾರ್ಯಕರ್ತರ ಜೊತೆ ಶಾಸಕರು ಹೆಜ್ಜೆ ಹಾಕಿದರು.

ಪಾದಯಾತ್ರೆ ಸಂಚಾಲಕ ದೇವದಾಸ್ ಶೆಟ್ಟಿ, ಮಾದವ ಮಾವೆ, ಸಹಸಂಚಾಲಕ ಸುದರ್ಶನ್ ಬಜ, ರಾಜ್ಯ ನೀರು ಸರಬರಾಜು ಹಾಗೂ ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಗ್ರಾ.ಪಂ.ಅಧ್ಯಕ್ಷೆ ಮೋಹಿನಿ , ಉಪಾಧ್ಯಕ್ಷ ಸುನಿಲ್, ಗ್ರಾ.ಪಂ.ಸದಸ್ಯರಾದ ವಿಶ್ವನಾಥ್,ವಿಜಯ್ ಕುಮಾರ್, ಹರೀಶ್ ಶೆಟ್ಟಿ ಪಡು, ರೂಪೇಶ್ ಪೂಜಾರಿ, ಯಶೋಧ ಮೇಗಿನಕುರಿಯಾಳ, ಪ್ರಮುಖರಾದ ಚೆನ್ನಪ್ಪ ಆರ್.ಕೋಟ್ಯಾನ್, ಕಮಲಾಕ್ಷಿ ಪೂಜಾರಿ, ದಿನೇಶ್ ಅಮ್ಟೂರು, ನಳಿನಿ ಶೆಟ್ಟಿ, ಅರುಣ್ ರೋಷನ್ ಡಿ.ಸೋಜ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ,ಪ್ರಸಾದ್ ಕುಮಾರ್ ರೈ, ಆಶಾ ಪಿ.ರೈ, ಸುರೇಶ್ ಕೋಟ್ಯಾನ್, ರೋನಾಲ್ಡ್ ಡಿ.ಸೋಜ, ಭಾರತಿ ಚೌಟ, ಸುಪ್ರೀತ್ ಆಳ್ವ, ಕಾರ್ತಿಕ್ ಬಲ್ಲಾಳ್, ಸಂತೋಷ್ ರಾಯಿಬೆಟ್ಟು, ಪದ್ಮನಾಭ ಬಂಟ್ವಾಳ, ಧನಂಜಯ ಶೆಟ್ಟಿ, ಚರಣ್ ಜುಮಾದಿಗುಡ್ಡೆ, ಪ್ರಕಾಶ್ ಬೆಂಗಳೂರು, ಕುಮಾರ್ ಅಳ್ವ, ಅನಿಲ್ ಕೊಟ್ಟಾರ,ರಾಮಚಂದ್ರ ಸುವರ್ಣ ಆಲಾಡಿ,ಉದಯ ಪ್ರಭು, ರಾಮ್ ಮೋಹನ್ ಶೆಟ್ಟಿ, ದಿನೇಶ್ , ಪ್ರಶಾಂತ್ ಕೆಂಪುಗುಡ್ಡೆ, ಚಂದ್ರಕಲಾಯಿ, ಲೋಕೇಶ್ , ಕುಮಾರ್ ಭಟ್ ,ಭಾಸ್ಕರ್ ಟೈಲರ್ , ಸೀತಾರಾಮ ಪೂಜಾರಿ, ಶೇಖರ್ ಶೆಟ್ಟಿ,ಲೋಕೇಶ್ ಸುವರ್ಣ, ವಾಮನ ಆಚಾರ್ಯ, ಸದಾನಂದ ಶೆಟ್ಟಿ ರಂಗೋಲಿ, ಭುವನೇಶ್ ಪಚ್ಚಿನಡ್ಕ, ರತ್ನಾಕರ್ ಶೆಟ್ಟಿ ,ಲಖಿತಾ ಆರ್‌ಶೆಟ್ಟಿ, ಸುಷ್ಮಾಚರಣ್, ದೇವಿಪ್ರಸಾದ್, ಮನೋಜ್ ಕಳ್ಳಿಗೆ, ವೆಂಕಟೇಶ ನಾವಡ, ಗಣೇಶ್ ಪೂಜಾರಿ, ದಾಮೋದರ ನೆತ್ತರಕೆರೆ, ಕಿಶೋರ್ ಪಲ್ಲಿಪಾಡಿ, ಗಣೇಶ್ ರೈ ಮಾಣಿ, ರಾಧಾಕೃಷ್ಣ ತಂತ್ರಿ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter