ಗ್ರಾಮವಿಕಾಶ ಯಾತ್ರೆ ” ” ಗ್ರಾಮದೆಡೆಗೆ ಶಾಸಕರ ನಡಿಗೆ” ಐದನೇ ದಿನದ ಪಾದಯಾತ್ರೆ
ಬಂಟ್ವಾಳ :ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರ ನೇತ್ರತ್ವದಲ್ಲಿ ” ಗ್ರಾಮವಿಕಾಶ ಯಾತ್ರೆ ” ” ಗ್ರಾಮದೆಡೆಗೆ ಶಾಸಕರ ನಡಿಗೆ” ಐದನೇ ದಿನದ ಪಾದಯಾತ್ರೆ ಕಡೇಶಿವಾಲಯ ಚಿಂತಾಮಣಿ ಶ್ರೀ ಲಕ್ಮೀನರಸಿಂಹ ದೇವಸ್ಥಾನದಿಂದ ಹೊರಡಿತು.

ಶಾಸಕ ರಾಜೇಶ್ ನಾಯ್ಕ್ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ದೇವರಿಗೆ ಪೂಜೆ ಸಲ್ಲಿಸಿ , ವಂದೆ ಮಾತರಂ ಗೀತೆಯನ್ನು ಹಾಡಿದ ಬಳಿಕ ಶಾಸಕ ರಾಜೇಶ್ ನಾಯ್ಕ್ ಅವರು ಭೂತಾಯಿಗೆ ನಮಿಸಿ ಪಾದಯಾತ್ರೆ ಯಲ್ಲಿ ಹೆಜ್ಜೆ ಹಾಕಿದರು.

ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ,ಸುದರ್ಶನ್ ಬಜ, ಸುಲೋಚನ ಜಿ.ಕೆ.ಭಟ್, ಕಮಲಾಕ್ಷಿ ಪೂಜಾರಿ, ರಮನಾಥ ರಾಯಿ, ಚೆನ್ನಪ್ಪ ಆರ್.ಕೋಟ್ಯಾನ್, ಕೃಷ್ಣಪ್ಪ ಪೂಜಾರಿ, ದಿನೇಶ್ ಅಮ್ಟೂರು, ಮುಸ್ತಫಾ ಕಲ್ಲಡ್ಕ, ಜನಾರ್ದನ ಬೊಂಡಾಲ, ಸುಪ್ರೀತ್ ಆಳ್ವ, ದಿನೇಶ್ ದಂಬೆದಾರ್, ರೊನಾಲ್ಡೊ ಡಿ.ಸೋಜ, ಚರಣ್ ಜುಮಾದಿಗುಡ್ಡೆ, ಸುರೇಶ್ ,ಬನಾರಿ, ಶಾಂತಪ್ಪ ಪೂಜಾರಿ, ಶಶಿಕಲಾ, ಸಂಪತ್ ಸುವರ್ಣ, ವಿದ್ಯಾ ದರ ರೈ, ತಿರುಮಲೇಶ್ವರ ಭಟ್, ಶರತ್ ಶೆಟ್ಟಿ, ಸುರೇಶ್ ಕಣ್ಣೊಟ್ಟು, ಜಯ ಆರ್, ಭಾರತಿ, ಬಾಲಕೃಷ್ಣ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಗಣೇಶ್ ಆರ್ ಶೆಟ್ಟಿ, ಸನತ್ ,ಸೀತಾರಾಮ ಪೂಜಾರಿ, ದೇವಿಪ್ರಸಾದ್, ಜಯಂತ,ಕಾರ್ತಿಕ್ ಬಲ್ಲಾಳ್,ಗಣೇಶ್ ರೈ ಮಾಣಿ ಮತ್ತಿತರರು ಪಾಲ್ಗೊಂಡರು.
