ವಾಮಂಜೂರು:ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ನಬಾರ್ಡ್ಇ ದರ ಸಹಯೋಗದೊಂದಿಗೆ ಎಸ್ ಸಿ ಡಿ ಸಿ ಸಿ ಬ್ಯಾಂಕ್ ವಾಮಂಜೂರು ಶಾಖೆಯಲ್ಲಿ ಬ್ಯಾಂಕ್ ಶಾಖೆಯಲ್ಲಿ ಬ್ಯಾಂಕ್ ನ ಗ್ರಾಹಕರಿಗೆ ಆರ್ಥಿಕ ಅರಿವು ಹಾಗೂ ಮಾಹಿತಿ ಕಾರ್ಯಗಾರ ಡಿ.30ರಂದು ಶುಕ್ರವಾರ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ಶ್ರೀ ಬಿ. ಜೈರಾಜ್ ರೈ ಯವರು ವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ NGVCT ಯ ಸಿಇಒ ಪೂರ್ಣಿಮಾ ರಾಜೇಶ್ ಶೆಟ್ಟಿ, ಎಸ್ ಸಿ ಡಿಸಿಸಿ ಬ್ಯಾಂಕ್ ನ ಹಿರಿಯ ಮೇಲ್ವಿಚಾರಕಿ ಶ್ರೀಮತಿ ನಿಶ್ಚಿತಾ, ಎಸ್ ಸಿ ಡಿ ಸಿ ಸಿ ಬ್ಯಾಂಕ್ ವಾಮಂಜೂರು ಶಾಖೆಯ ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ರೆಹೆನಾತ್ ರವರು ಉಪಸ್ಥಿತರಿದ್ದರು. ಉಮೇಶ್ ಕೋಟ್ಯಾನ್ ಸ್ವಾಗತಿಸಿ ನಾಗರಾಜ್ ವಂದಿಸಿದರು
