ಕಲ್ಲಡ್ಕ: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ಮತ್ತು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕಇದರ ಜಂಟಿ ಆಶ್ರಯದಲ್ಲಿ ಶ್ರೀರಾಮ ಪದವಿಪೂರ್ವ ವಿಭಾಗದಲ್ಲಿ ರಾಷ್ಟ ಮಟ್ಟದ ತ್ರೋಬಾಲ್ ಪಂದ್ಯಾಟದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ವರದಿಯನ್ನು ಆನಂದ ಶೆಟ್ಟಿ ಕಲ್ಲಡ್ಕ, ರಾಜ್ಯಕ್ರೀಡಾ ಸಂಯೋಜಕರು ವಿದ್ಯಾಭಾರತಿ ಕರ್ನಾಟಕ ಇವರು ಮಂಡಿಸಿದರು. ರಾಜಸ್ಥಾನ ಕ್ಷೇತ್ರದ ತರಬೇತು ದಾರರಾಜ್ ಸಿಂಗ್, ಪಶ್ಚಿಮ ಮಧ್ಯಕ್ಷೇತ್ರಯು. ಪಿ. ತರಬೇತುದಾರ ವಿಷ್ಣು ಕುಮಾರ್, ಹರಿಯಾಣಕ್ಷೇತ್ರದ ತರಬೇತುದಾರರಾದಅನೂಪ್ ಜಿ ಮತ್ತು ಪರಿವೀಕ್ಷಣಾಧಿಕಾರಿ ಶ್ರೀ ಬಿ.ಡಿ. ಮಣಿ ಚೆನೈ,ಕ್ರೀಡಾ ಸಂಯೋಜಕರು ವಿದ್ಯಾಭಾರತಿ ದಕ್ಷಿಣಕ್ಷೇತ್ರ ಅನಿಸಿಕೆಗಳನ್ನು ಹಂಚಿಕೊಂಡರು.

ದ್ವಿತೀಯ ಪಿಯುಸಿ ವಿಭಾಗದಕುಮಾರಿ ಪ್ರಕೃತಿ ವೈಯಕ್ತಿಕಗೀತೆ ಹಾಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಹ ಸಂಘಟನಾ ಕಾರ್ಯದರ್ಶಿ ವಿದ್ಯಾಭಾರತಿದಕ್ಷಿಣ ಮಧ್ಯಕ್ಷೇತ್ರದ ಜಿ ಆರ್‌ಜಗದೀಶ್‌ಇವರುತಂಡದ ವ್ಯವಸ್ಥಾಪಕ ಮತ್ತು ತರಬೇತುದಾರ ಕುಶಲತೆಯಿಂದ ತಂಡ ವಿಜಯ ಗಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಶ್ರೀ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡುತ್ತಾ ಇಲ್ಲೊಂದು ಪುಟ್ಟ ಭಾರತ ನಮ್ಮಕಣ್ಣ ಮುಂದಿದೆ ಭಾಷೆ ಬೇರೆಯಾದರೂ ಭಾವಒಂದೇ ಎಂಬ ಸಂದೇಶ ಸಾರಿದೆ ಈ ಕ್ರೀಡಾಕೂಟಎಂದುಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಯು.ಪಿ.ಹರಿದಾಸ್ ವೇದವ್ಯಾಸ ಮಂದಿರ್ ಪಾಲಕ್ಕಾಡ್‌ನ ದೈಹಿಕ ಶಿಕ್ಷಣ ನಿರ್ದೇಶಕರು, ದಕ್ಷಿಣ ಕ್ಷೇತ್ರಖೇಲ್‌ಖೂದ್ ಪ್ರಮುಖ್ ಕೇರಳ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, , ಉಮೇಶ್ ವಿದ್ಯಾಭಾರತಿ ಪ್ರಾಂತ ಸಂಘಟನಾ ಕಾರ್ಯದರ್ಶಿ, ಲೋಕಯ್ಯ ಜಿಲ್ಲಾಅಧ್ಯಕ್ಷರು, ರಮೇಶ್‌ಜಿಲ್ಲಾ ಕಾರ್ಯದರ್ಶಿ ವಿದ್ಯಾಭಾರತಿ ದಕ್ಷಿಣ ಕನ್ನಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಾಲ ವರ್ಗ,ಕಿಶೋರ ವರ್ಗ ಮತ್ತು ತರುಣ ವರ್ಗದ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ದಕ್ಷಿಣ ಮಧ್ಯ ಕ್ಷೇತ್ರದ ವಿಜೇತ ತಂಡಗಳಿಗೆ ಅತಿಥಿಗಳು ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಯಕ್ರಮವನ್ನು ಶ್ರೀ ರಾಮ ಪ್ರಥಮ ದರ್ಜೆಕಾಲೇಜುನ ಪ್ರಾಂಶುಪಾಲ ಶ್ರೀ ಕೃಷ್ಣ ಪ್ರಸಾದ್‌ಕಾಯರ್‌ಕಟ್ಟೆ ಸ್ವಾಗತಿಸಿ, ಶ್ರೀರಾಮ ಸೆಕೆಂಡರಿ ಸ್ಕೂಲ್‌ನ ಉಪಪ್ರಾಂಶುಪಾಲರಾದ ತಿರುಮಲೇಶ್ ಪ್ರಶಾಂತ್ ಧನ್ಯವಾದಗೈದರು. ಭೌತ ಶಾಸ್ತ್ರ ಉಪನ್ಯಾಸಕಿ ನಂದ ಮಾತಾಜಿ ಕಾರ್ಯ ಕ್ರಮವನ್ನು ನಿರ್ವಹಿಸಿದರು.

