ಪೊಳಲಿ : ಬ್ರಹ್ಮ ಶ್ರೀ ನಾರಾಯಣಗುರು ಮಂದಿರ ಕೊಳತ್ತಮಜಲು, ಬಡಗ ಬೆಳ್ಳೂರು ವತಿಯಿಂದ ಸಾರ್ವಜನಿಕ ಶನಿಪೂಜೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರದ ಸೇಸಪ್ಪ ಕೋಟ್ಯಾನ್ ದಂಪತಿ ಮತ್ತು ಮತ್ತು ದಿ. ಸೀನ ಪೂಜಾರಿ ಪರವಾಗಿ ಎಚ್ ಎಸ್ ಜನಾರ್ಧನ ದಂಪತಿಗೆ ಸನ್ಮಾನ ಡಿ.10ರಂದು ನಡೆಯಿತು.

ಶನಿಪೂಜೆಯನ್ನು ಎಂ ಲೋಕೇಶ್ ಶಾಂತಿ ನಡೆಸಿಕೊಟ್ಟರು .

.ಸಮಾರಂಭ ಅಧ್ಯಕ್ಷತೆಯನ್ನು ಮಾಜಿ ಶಾಸಕ ಎ . ರುಕ್ಮಯ ಪೂಜಾರಿ ವಹಿಸಿದರು.
ಎಂ. ಲೋಕೇಶ್ ಶಾಂತಿ ಆಶೀರ್ವಚನ ನೀಡಿದರು.

ಮುಖ್ಯ ಅಥಿತಿಗಳಗಿ ಬಿಲ್ಲವ ಮುಖಂಡ ಬೇಬಿ ಕುಂದರ್ , ಭಾರತ್ ಬ್ಯಾಂಕ್ ನಿರ್ದೇಶಕ ಕೆ.ಗಂಗಾಧರ ಪೂಜಾರಿ ಕೊಪ್ಪಳ, ಬಡಗಬೆಳ್ಳೂರು ಗ್ರಾ.ಪಂ ಉಪಾಧ್ಯಕ್ಷೆ ಮಮತಾ ಪೂಜಾರಿ, ತಾಚಪ್ಪ ಪೂಜಾರಿ ,ರೇಖಾ ವಸಂತ್ ,ಯಶವಂತ ಪೂಜಾರಿ,ಯೋಗೀಶ್ ಪೂಜಾರಿ ಸಾಣೂರು, ರಮೇಶ್ ಪೂಜಾರಿ, ಉಮೇಶ್ ಪೂಜಾರಿ, ಬ್ರಹ್ಮ ಶ್ರೀ ನಾರಾಯಣಗುರು ಮಂದಿರದ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಕೊಳತ್ತಮಜಲು ಗ್ರಾಮದ ನಾಗರಿಕರು ಉಪಸ್ಥಿತರಿದ್ದರು. ರಾಜ್ ಕೋಟ್ಯಾನ್ ಸ್ವಾಗತಿಸಿ. ದಿನೇಶ್ ವಾರಕೋಡಿ ನಿರೂಪಿಸಿದರು.

