ಶ್ರೀ ಕ್ಷೇತ್ರ ಪೊಳಲಿಯಲ್ಲಿ ಸಮಾಜದ ಗೌರವಾನ್ವಿತರಿಗೆ ಸನ್ಮಾನ.
ಪೊಳಲಿ:ಕರಿಯಂಗಳ ಗ್ರಾಮದ ನಾಗರಿಕರ ಪರವಾಗಿ “ಶ್ರೀ ಕ್ಷೇತ್ರ ಪೊಳಲಿಯಲ್ಲಿ “
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾತರಾದ ಪಚಿನಡ್ಕ ಸೇಸಪ್ಪ ಕೋಟ್ಯಾನ್ ಹಾಗೂ ಕರ್ನಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ
ಪೊಳಲಿ ಜಯರಾಮಭಟ್ ಇವರಿಗೆ “ಪೌರ ಸನ್ಮಾನ ” ಶ್ರೀ ಕ್ಷೇತ್ರ ಪೊಳಲಿಯಲ್ಲಿ ಗುರುವಾರ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ವಹಿಸಿದ್ದರು.
ಪೊಳಲಿ ರಾಮಕ್ರಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಆಶೀರ್ವಚನ ನೀಡಿ ಸೇಸಪ್ಪಕೋಟ್ಯಾನ್ ಹಾಗೂ ಜಯರಾಮ ಭಟ್ ಅವರು ಸಮಾಜಕ್ಕಾಗಿ ಬದುಕುವ ಮೂಲಕ ಜೀವನ ಸಾರ್ಥಕವಾಗಿದೆ ಎಂದರು.ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ : ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಕೋಡಿಮಜಲು
ಅನಂತ ಪದ್ಮನಾಭ ಉಪಾಧ್ಯಾಯ ಸನ್ಮಾನಿತರನ್ನು ಉದ್ದೇಶಿಸಿ ಮಾತನಾಡಿದರು. ಸುಬ್ರಾಯ ಕಾರಂತ ಹಾಗೂ ಕೇಶವ ಪೊಳಲಿ ಸನ್ಮಾನ ಪತ್ರ ವಾಚಿಸಿದರು, ಈ ಸಂದರ್ಭದಲ್ಲಿ ಸುಕೇಶ್ ಚೌಟ , ಯಶೋಧರ ಪೊಳಲಿ, ಚಂದಶೇಖರ್ ಶೆಟ್ಟಿ. ಬಡಕಬೈಲು, ಯಶವಂತ ಪೊಳಲಿ, ಲೋಕೇಶ್ ಭರಣಿ, ಸೋಮಶೇಖರ್ ಪೊಳಲಿ, ಮೋಹನ್ ಬಿಲ್ವಪತ್ರೆ ಹಾಗೂ ಕರಿಯಂಗಳ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು, ವೆಂಕಟೇಶ್ ನಾವಡ ಸ್ವಾಗತಿಸಿ ಸುಬ್ರಾಯ ಕಾರಂತ ವಂದಿಸಿದರು. ಬಿ.ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸುದರು.