ಫಿಲಿಪೈನ್ಸ್‌ನಲ್ಲಿ ಭೀಕರ ಪ್ರವಾಹ – 98 ಸಾವು, 62 ಜನ ನಾಪತ್ತೆ
ಮನಿಲ: ವಾರಾಂತ್ಯದಲ್ಲಿ ಸುರಿದ ಧಾರಾಕಾರ ಮಳೆಗೆ (Rain) ಫಿಲಿಪೈನ್ಸ್‌ನಲ್ಲಿ (Philippines) ಭೀಕರ ಪ್ರವಾಹದ (Flood) ಪರಿಸ್ಥಿತಿ ಉಂಟಾಗಿದ್ದು, ಇಲ್ಲಿಯವರೆಗೆ 98 ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಭಾರೀ ಪ್ರವಾಹದಿಂದಾಗಿ ದೇಶಾದ್ಯಂತ ಸುಮಾರು 62 ಜನರು ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ. 69 ಜನರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಅರ್ಧಕ್ಕಿಂತ ಹೆಚ್ಚು ಸಾವುಗಳು ಬ್ಯಾಂಗ್ಸಮೊರೊದಲ್ಲಿ ದಾಖಲಾಗಿದೆ. ಈ ಪ್ರದೇಶದಲ್ಲಿ ಈಗಾಗಲೇ 53 ಸಾವುಗಳು ಸಂಭವಿಸಿದ್ದು, 22 ಜನರು ನಾಪತ್ತೆಯಾಗಿದ್ದಾರೆ. ಭೀಕರ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತಗಳು ಸಂಭವಿಸುತ್ತಿವೆ.
ರಾಜಧಾನಿ ಮನಿಲಾ ಬಳಿಯ ಕ್ಯಾವಿಟ್ ಪ್ರದೇಶದಲ್ಲಿ ಮುಳುಗಿರುವ ಹಳ್ಳಿಯಲ್ಲಿ ವೈಮಾನಿಕ ತಪಾಸಣೆ ನಡೆಸಲು ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮೊರ್ಕೋಸ್ ಜೂನಿಯರ್ ಇಂದು ಹೊರಟಿದ್ದಾರೆ. ಸಾವುಗಳ ಸಂಖ್ಯೆಯ ಬಗ್ಗೆ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ.