ಕುತ್ತಾರು ಸ್ವಾಮಿ ಕೊರಗಜ್ಜ ನವರ ಆದಿ ಸ್ಥಳ ವೆಬ್ ಸೈಟ್ ಹಾಗೂ ಕೃತಿ ಬಿಡುಗಡೆ.
ಕುತ್ತಾರು: ಜಗತ್ತಿನಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿರುವ ಕುತ್ತಾರಿನ ಸ್ವಾಮಿ ಕೊರಗಜ್ಜನವರ ಕುತ್ತಾರು ದೆಕ್ಕಾಡು ಆದಿಸ್ಥಳದ ಕುರಿತಾದ ಸಮಗ್ರ ವಾಸ್ತವಾಂಶಗಳನ್ನು ಭಕ್ತರ ಜತೆ ಸಂವಹನಗೊಳಿಸಲು ಈಗ www.swamykoragajjaaadisthalakuthar.com ವೆಬ್ ಸೈಟ್ ನ ರಚನೆಯಾಗಿದೆ
ಮಂಗಳೂರು ತಾಲೂಕಿನ ಮುನ್ನೂರು ಗ್ರಾಮದ ಕುತ್ತಾ ರಿನಲ್ಲಿರುವ ಶ್ರೀ ಪಂಜಂದಾಯ, ಬಂಟ, ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಆಶೀರ್ವಾದದೊಂದಿಗೆ ಜ್ಯೋತಿಷ್ಯ ರಾದ ವೇದಮೂರ್ತಿ ದಿನೇಶ್ ಪಣಿಕ್ಕರ್ ಅವರಿಂದ ಕ್ಷೇತ್ರದ ಪಾವಿತ್ರ್ಯತೆ ಮತ್ತು ಅಭಿವೃದ್ಧಿಯ ಬಗ್ಗೆ ತಾಂಬೂಲ ಪ್ರಶ್ನೆಯಲ್ಲಿ ಚಿಂತಿ ಸಲಾಯಿತು.
ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಮಾಗಣ್ತಡಿ ಶ್ರೀಧರ್ ಶೆಟ್ಟಿ ಅವರು ಆದಿ ಸ್ಥಳದ ವೆಬ್ ಸೈಟ್ ಹಾಗೂ ಮಾಹಿತಿ ಕೃತಿಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾಗಣ್ತಡಿ ಮನೆತನದವರು, ಕುತ್ತಾರುಗುತ್ತು ಹಾಗೂ ಪರಿಚಾರಕರು, ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಪೊಲೀಸ್ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಯ ಅಧಿಕಾರಿಗಳ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು ಈ ವೆಬ್ ಸೈಟ್ ನ್ನು ವೆಬ್ ಬ್ರೈನಿ ಸಾಫ್ಟ್ ವೇರ್ ಸೊಲ್ಯೂಶನ್ಸ್ ಸಂಸ್ಥೆಯವರು ವಿನ್ಯಾಸಗೊಳಿಸಿದ್ದಾರೆ.
ಕೊರಗಜ್ಜನ ಏಳು ಆದಿಸ್ಥಳ ಗಳಾದ ದೆಕ್ಕಾಡು(ಕುತ್ತಾರು), ಸೋಮೇಶ್ವರ, ಬೊಲ್ಯ, ಮಿತ್ತಗೆಲ, ಉಜಿಲ, ತಲ, ದೇರಳಕಟ್ಟೆಯಲ್ಲಿ ಯಾವುದೇ ರೀತಿಯ ಗುಡಿಗೋಪುರಗಳು ಮೂರ್ತಿ ಆರಾಧನೆಗಳು ದೀಪ ಧೂಪಕ್ಕೆ ಆಸ್ಪದವಿಲ್ಲ. ಇದು ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಶ್ರೀ ಪಂಜಂದಾಯ ದೈವದ ವರಪ್ರಸಾದದಿಂದ ಶ್ರೀ ಕೊರಗತನಿಯ ದೈವವು ಪಡೆದ ಏಳು ಆದಿ ಸ್ಥಳಗಳ ಪೈಕಿ ಆರರಲ್ಲಿ ಭಕ್ತರ ಹರಕೆಯ ಕೋಲಗಳನ್ನು ಅನಾದಿ ಕಾಲದಿಂದಲೂ ಅನಾದಿಕಾಲದಿಂದಲೂ ದೀಪದ ಬೆಳಕಿಲ್ಲದೆ ಕತ್ತಲಲ್ಲಿ ಅರ್ಪಿಸಲಾಗುತ್ತಿದೆ.