ಮೂಡುಬಿದರೆ: ಇಲ್ಲಿನ ಪಡುಮಾನರ್ಾಡು ಗ್ರಾಮದ ಬಸವನ ಕಜೆ ಎಂಬಲ್ಲಿ ವಿವಾಹಿತ ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನಿಸಿದ ಆರೋಪದ ಮೇಲೆಗೆ ಸುರೇಶ್(28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯ ಸಂಬಂಧಿಯಾಗಿರುವ ಸ್ಥಳೀಯ ನಿವಾಸಿ ಸುರೇಶ್ ಕಳೆದ ನ11ರಂದು ಅಪರಾಹ್ನ ಮಹಿಳೆಯ ಮನೆ ಮಂದಿ ಕೂಲಿಗೆ ಹೋಗಿ ಆಕೆ ಒಂಟಿಯಾಗಿದ್ದ ವೇಳೆಗೆ ಬಂದು ಮಾನಭಂಗಕ್ಕೆ ಯತ್ನಿಸಿದ್ದ. ಆಕೆ ಪ್ರತಿಭಟಿಸಿದಾಗ ಪರಾರಿಯಾಗಿದ್ದ ಎನ್ನಲಾಗಿದೆ. ಬಳಿಕ ಆರೋಪಿಯ ಸಹೋದರಿ ಶೋಭಾ ಎನ್ನುವವರೂ ಮಹಿಳೆಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದರೆ ಕೈಕಾಲು ಮುರಿಯುವುದಾಗಿ ದೂರವಾಣಿ ಮೂಲಕ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ.
ಮಹಿಳೆಯ ಅತ್ಯಾಚಾರ ಯತ್ನ ಪ್ರಕರಣ ಕೊನೆಗೂ ಒಂದು ವಾರದ ಬಳಿಕ ಪೋಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಆರೋಪಿಯನ್ನು ಬಂಧಿಸಿರುವ ಪೋಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ.

By Suddi9

Leave a Reply

Your email address will not be published. Required fields are marked *