Published On: Mon, Oct 17th, 2022

ಸಾಹಿತ್ಯ ಪ್ರಶಸ್ತಿಗೆ ಲೇಖಕಿಯರಿಂದ ಕೃತಿಗಳ ಆಹ್ವಾನ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಕರಾವಳಿ ಲೇಖಕಿಯರ ವಾಚಕಿಯರ ಸಂಘವು 2022-23ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳಿಗಾಗಿ ಲೇಖಕಿಯರ ಕೃತಿಗಳನ್ನು ಆಹ್ವಾನಿಸಿದೆ. ನವೆಂಬರ್ 10ರೊಳಗೆ ಕೃತಿಗಳನ್ನು ಕಳುಹಿಸಿಕೊಡುವಂತೆ ಪ್ರಕಟಣೆ ತಿಳಿಸಿದೆ.

1) ರಾಜ್ಯ ಮಟ್ಟದ `ಸಾರಾ’ ದತ್ತಿ ಪ್ರಶಸ್ತಿಗಾಗಿ ಉದಯೋನ್ಮುಖ ಬರಹಗಾರ್ತಿಯರ 2020ರ ನಂತರ ಪ್ರಕಟವಾÀದ ಮೊದಲ ಪ್ರಕಟಿತ ಕವನ ಸಂಕಲನ

2) ಚಂದ್ರಭಾಗಿ ರೈ ದತ್ತಿ ಬಹುಮಾನ : ಲೇಖಕಿಯರ ಇತ್ತೀಚಿನ ಅಪ್ರಕಟಿತ ಕನಿಷ್ಠ 25 ಲೇಖನಗಳ ಸಂಗ್ರಹ. (ಈ ಸಂಗ್ರಹವು ಬಹುಮಾನಕ್ಕೆ ಆಯ್ಕೆಯಾದಾಗಿ ಕೃತಿಯಾಗಿ ಪ್ರಕಟಗೊಳ್ಳುವಾಗ ಕ.ಲೇ.ವಾ ಚಂದ್ರಭಾಗಿ ರೈ ದತ್ತಿ ಪ್ರಶಸ್ತಿ ಪುರಸ್ಕøತ ಎಂದು ಪ್ರಕಟಿಸುವುದು ಕಡ್ಡಾಯವಾಗಿರುತ್ತದೆ)

3) ಶ್ರೀಮತಿ ಯಶೋದಾ ಜೆನ್ನಿ ಸ್ಮøತಿ ಸಂಚಯ ಪ್ರಶಸ್ತಿ:
(2021ರಲ್ಲಿ ಪ್ರಕಟವಾದ ಲೇಖಕಿಯರ ಸಣ್ಣ ಕಥೆಗಳು ಸಂಕಲಕ್ಕಾಗಿ)

4) ಇಂದಿರಾ ಹಾಲಂಬಿ ಸಂದೀಪ ಸಾಹಿತ್ಯ ಪ್ರಕಾಶನ ದತ್ತಿ ಪ್ರಶಸ್ತಿಗಾಗಿ ಲೇಖಕಿಯರಿಂದ ನಾಟಕ ಹಸ್ತ ಪ್ರತಿಗಳ ಆಹ್ವಾನ :
ಆಯ್ಕೆಗೊಂಡ ನಾಟಕ ಹಸ್ತ ಪ್ರತಿಯನ್ನು ಮೊತ್ತ ಮೊದಲು ಪ್ರಕಟಿಸುವ ಹಕ್ಕು ಸಂದೀಪ ಸಾಹಿತ್ಯ ಪ್ರಕಾಶನಕ್ಕೆ ಇರುತ್ತದೆ . ಪ್ರಶಸ್ತಿಗೆ ಆಯ್ಕೆಯಾದ ಹಸ್ತ ಪ್ರಶಸ್ತಿಯನ್ನು ಪ್ರಕಟಿಸಿದಾಗ ಕೃತಿಕಾರರಿಗೆ 15 ಪ್ರತಿಗಳನ್ನು ನೀಡಲಾಗುವುದು

• ಪ್ರತಿಗಳನ್ನು ಕಳುಹಿಸಬೇಕಾದ ಸಂಘದ ವಿಳಾಸ:
ಕರಾವಳಿ ಲೇಖಕಿಯರ –ವಾಚಕಿಯರ ಸಂಘ(ರಿ), ‘ಸಾಹಿತ್ಯ ಸದನ’ ಉರ್ವಸ್ಟೋರ್ಸ್, ಅಶೋಕನಗರ ಅಂಚೆ ಕಛೇರಿ ಹಿಂಬದಿ, ಮಂಗಳೂರು-575 006

• ಯಾವುದೇ ಕೃತಿಗಳನ್ನು ಹಿಂದಿರುಗಿಸಲಾಗುವುದಿಲ್ಲ ಹಾಗೂ ಪೂರ್ಣ ವಿಳಾಸ ಸಂಪರ್ಕ ಸಂಖ್ಯೆಯನ್ನು ಅರ್ಜಿಯೊಂದಿಗೆ ನಮೂದಿಸಬೇಕಾಗಿದ್ದು, ಅಪ್ರಕಟಿತ ಬರಹಗಳು ತಮ್ಮ ಸ್ವಂತದ್ದೆಂದು ಲೇಖಕರು ದೃಢೀಕರಿಸಿ ಸಲ್ಲಿಸಬೇಕಾಗಿದೆ.

ಹೆಚ್ಚಿನ ಮಾಹಿತಿಗಾಗಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳ್ಯಾರ್ (9480570882) ಅಥವಾ ಕಾರ್ಯದರ್ಶಿ ಸುಜಾತ ಕೊಡ್ಮಣ್ (9845760278) ಅವರನ್ನು ಸಂಪರ್ಕಿಸಬಹುದಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter