ಬಂಟ್ವಾಳ: ತಾಲ್ಲೂಕಿನ ಅಮ್ಮೆಮಾರ್ ಜುಮ್ಮಾ ಮಸೀದಿ ಬಳಿ ಈದ್ ಮಿಲಾದ್ ಪ್ರಯುಕ್ತ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ಭಾನುವಾರ ಶಿಲಾನ್ಯಾಸ ನೆರವೇರಿಸಲಾಯಿತು.

ಅಮ್ಮೆಮಾರ್ ಬದ್ರಿಯಾ ಮದರಸ ಮತ್ತು ಜುಮ್ಮಾ ಮಸೀದಿ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಇಶ್ಕೇ ಮಿಲಾದ್ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನೂತನ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಅ.09ರಂದು ಭಾನುವಾರ ನಡೆಯಿತು.

ಸಯ್ಯದ್ ಹಸನ್ ತಂಗಳ್ ಬಾಅಲವಿ ಕುಕ್ಕಾಜೆ ಶಿಲಾನ್ಯಾಸ ನೆರವೇರಿಸಿದರು. ಮಸೀದಿ ಆಡಳಿತ ಮಂಡಳಿ ಸಮಿತಿ ಅಧ್ಯಕ್ಷ ಉಮರಬ್ಬ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖತೀಬ ಮೊಹಮ್ಮದ್ ಆಲಿ ಫೈಝಿ ಇರ್ಫಾನಿ ಧಾರ್ಮಿಕ ಸಂದೇಶ ನೀಡಿದರು. ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಎಫ್. ಎ., ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಜೊತೆ ಕಾರ್ಯದರ್ಶಿ ಮೊಹಮ್ಮದ್ ಶಾಫಿ, ಕೋಶಾಧಿಕಾರಿ ಅಬ್ದುಲ್ ರಜಾಕ್, ಲೆಕ್ಕಪರಿಶೋಧಕ ಬಶೀರ್ ತಂಡೇಲ್ ಸದಸ್ಯರಾದ ಹೈದರ್, ಇಕ್ಬಾಲ್, ಹನೀಫ್, ಇಬ್ರಾಹಿಂ, ಜಮಾಲ್, ಅಬ್ದುಲ್ ಕುಂಞ, ಖಾದರ್, ಸದರ್ ಮುಅಲ್ಲಿಮ್ ಅಬೂಬಕ್ಕರ್ ಸಿದ್ದೀಕ್ ದಾರಿಮಿ, ಶಿಕ್ಷಕ ಇಕ್ಬಾಲ್ ಆಶ್ರಫಿ, ಇಸ್ಮಾಯಿಲ್ ಯಮಾನಿ, ಅಬ್ದುಲ್ ಹಮೀದ್ ಅರ್ಶದಿ, ಸಾದಿಕ್ ಫೈಝಿ, ಅಬೂಬಕ್ಕರ್ ಮದನಿ, ಅಬ್ದುಲ್ ಮಜೀದ್ ಮುಸ್ಲಿಯಾರ್ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *