ಸೋಮವಾರದಿಂದ ಮತ್ತೆ ಆಪರೇಷನ್ ಬುಲ್ಡೋಜರ್ ಆರಂಭ – ದೊಡ್ಡವರ ಬೇಟೆಗೆ ಜಂಟಿ ಸರ್ವೇ ಅಸ್ತ್ರ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಪರೇಷನ್ ಬುಲ್ಡೋಜರ್ ಪಾರ್ಟ್-2 ಶುರುಗೆ ಭರದ ಸಿದ್ಧತೆ ನಡೆಯುತ್ತಿದೆ. ದೊಡ್ಡವರ ರಣಬೇಟೆಗೆ ಪಾಲಿಕೆ ಈ ಬಾರಿ ಜಂಟಿ ಸರ್ವೇ ಅಸ್ತ್ರ ಪ್ರಯೋಗಕ್ಕೆ ಸಜ್ಜಾಗಿದೆ. ಸೋಮವಾರದಿಂದ ಮತ್ತೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಲು ಬಿಬಿಎಂಪಿ ಸಿದ್ಧವಾಗಿದೆ.

ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಗಳು ಜಲಾವೃತ್ತವಾಗಿತ್ತು. ರಾಜಕಾಲುವೆ ಒತ್ತುವರಿ ನಗರದ ಪರಿಸ್ಥಿತಿಗೆ ಕಾರಣವೆಂದು ಬರೋಬ್ಬರಿ 15 ದಿನ ನಗರದಲ್ಲಿ ಬುಲ್ಡೋಜರ್ ಘರ್ಜಿಸಿತು. 829 ಒತ್ತುವರಿಯಲ್ಲಿ ಮೊದಲ ಹಂತದ ಒತ್ತುವರಿ ತೆರವಿನಲ್ಲಿ ಹಲವೆಡೆ ಬುಲ್ಡೋಜರ್ ಘರ್ಜಿಸಿತು. ಈಗ ಬುಲ್ಡೋಜರ್ ಪಾರ್ಟ್-2ಗೆ ಸಿದ್ಧತೆ ನಡೆಯುತ್ತಿದೆ.
ರಾಜಕಾಲುವೆ ಒತ್ತುವರಿ ತೆರವು ಬುಲ್ಡೋಜರ್ ಪಾರ್ಟ್-2ಗೆ ಮಹದೇವಪುರದಲ್ಲಿ ಬರೋಬ್ಬರಿ 18 ಪ್ರಾಪರ್ಟಿಗಳು ಒತ್ತುವರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ. ಈ ಪ್ರಕಾರ ಸ್ಟೇ ಕಾರಣ ನೀಡಿ ತಪ್ಪಿಸಿಕೊಳ್ಳಬಾರದೆಂದು ಲೆಕ್ಕಚಾರ ಮಾಡಿ, ಸ್ಟೇ ಇರುವ ಕಡೆ ಅಧಿಕಾರಿ ಹಾಗೂ ಒತ್ತುವರಿದಾರರು ಜಂಟಿ ಸರ್ವೆ ನಡೆಸಲು ಸೂಚಿಸಲಾಗಿದೆ. ಒತ್ತುವರಿ ಕಂಡು ಬಂದರೆ ಬುಲ್ಡೋಜರ್ ಘರ್ಜನೆ ಪಕ್ಕಾ ಎನ್ನಲಾಗಿದೆ.