ಅಧ್ಯಾಪಕರ ಸಹಕಾರಿ ಸಂಘ ನಿ. ವಿಟ್ಲ ಮಹಾಸಭೆ ೫೦೭.೩೮ ಕೋಟಿರೂ ವ್ಯವಹಾರ,ಶೇ ೧೬%ಡಿವಿಡೆಂಡ್
ವಿಟ್ಲ: ವಿಠಲ ಪದವಿ ಪೂರ್ವಕಾಲೇಜಿನ ಸಭಾಂಗಣದಲ್ಲಿ ನಡೆದ ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ೩೯ನೇ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಕೆ ರಮೇಶ ನಾಯಕ್ ವಹಿಸಿ, ವಿಟ್ಲ ಅಧ್ಯಾಪಕರ ಸಹಕಾರಿ ಸಂಘವು ೨೦೨೧ ೨೦೨೨ನೇ ಸಾಲಿನಲ್ಲಿ ೫೦೭.೩೮ ಕೋಟಿರೂ ವ್ಯವಹಾರ ನಡೆಸಿ ೧.೫೯ ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ ೧೬% ಡಿವಿಡೆಂಡ್ ನೀಡಲಾಗುವುದುಎಂದು ತಿಳಿಸಿದರು.
೨೦೨೧-೨೦೨೨ ನೇ ಸಾಲಿನ ವರ್ಷಾಂತ್ಯಕ್ಕೆ ಸಂಘವು ೧೭೩ ಕೋಟಿರೂಠೇವಣಿ ಹಾಗೂ ೧೬೨.೭೬ಕೋಟಿರೂ ಹೊರ ಬಾಕಿ ಸಾಲವಿದೆ. ೪೪೭೮ ಮಂದಿ ಸದಸ್ಯರನ್ನು ಹೊಂದಿದೆ.ಸಂಘದ ಶಾಖೆಗಳು ಉತ್ತಮ ಲಾಭ ಗಳಿಸಿವೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು ಹಾಗೂ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ಅಧ್ಯಕ್ಷರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶ್ರೀ ರಮೇಶ್ ನಾಯಕ್ ಕೆ, ಉಪಾಧ್ಯಕ್ಷರಾದ ರಾಜೇಂದ್ರ ರೈ ಪಿ, ನಿರ್ದೇಶಕರುಗಳಾದ ಮೋನಪ್ಪ ಕೆ, ಶ್ರೀ ಸಂಜೀವ ಎಚ್, ಸುರೇಶ್ ಕುಮಾರ್, ಇಂದು ಶೇಖರ್, ಜಯರಾಮ, ಕಮಲಾಕ್ಷ, ರಾಮಕೃಷ್ಣರಾವ್, ಡಾ. ನವೀನ್ ಕೋಣಾಜೆ, ಗಂಗಾಧರ ಆಳ್ವಕೆ.ಎನ್, ಅನಿತಾ ಮಿನೇಜಸ್, ಚಿತ್ರಕಲಾ ಕೆ, ನವೀನ್ ಪಿ.ಎಸ್, ಪುಷ್ಪರಾಜ್ ಬಿ, ಉಮ್ಮರಗಿ ಶರಣಪ್ಪ, ಭಾರತಿ ಇವರುಗಳು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾದ ರಾಜೇAದ್ರರೈ ಪಿ ವಂದಿಸಿದರು, ಪ್ರಭಾರಜನರಲ್ ಮೆನೇಜರ್ ಮಾಲತಿ ವಿ.ಎಸ್ ವರದಿ ವಾಚಿಸಿದರು. ನಿರ್ದೇಶಕರಾದಶ್ರೀಗಂಗಾಧರ ಆಳ್ವ ಕೆ.ಎನ್, ಕಾರ್ಯಕ್ರಮ ನಿರೂಪಿಸಿದರು.