Published On: Sat, Sep 17th, 2022

ನಾನ್‍ವೆಜ್ ಊಟಕ್ಕೆಂದು ಬಂದವರಿಗೆ ಗೋಮಾಂಸ ಸರ್ವ್ – ಹೋಟೆಲ್ ಮಾಲೀಕ ಅರೆಸ್ಟ್

ಗಾಂಧೀನಗರ: ನಾನ್ ವೆಜ್ ಊಟ ಮಾಡಲು ಹೋಟೆಲ್ ಬಂದ ಗ್ರಾಹಕರಿಗೆ ಗೋಮಾಂಸ ಬಡಿಸಿದ ಆರೋಪದಡಿ ಹೋಟೆಲ್ ಮಾಲೀಕನನ್ನು (Hotel owner) ಪೊಲೀಸರು ಬಂಧಿಸಿದ್ದಾರೆ.

ರೆಸ್ಟೋರೆಂಟ್ ಮಾಲೀಕನ ಈ ಕೃತ್ಯದ ಬಗ್ಗೆ ತಿಳಿದ ಹಿಂದೂ ಸಂಘಟನೆಗಳು ಪೊಲೀಸರಿಗೆ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ. ಬಳಿಕ ರೆಸ್ಟೋರೆಂಟ್ (Restaurant) ಮೇಲೆ ದಾಳಿ ನಡೆಸಿದ ಪೊಲೀಸರು ಫ್ರಿಡ್ಜ್‌ನಲ್ಲಿದ್ದ (Fridge) 60 ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಸೂರತ್‍ನ(Surat) ಲಾಲ್‍ಗೇಟ್ ಪೊಲೀಸ್ ಠಾಣೆಯಲ್ಲಿ (Police Station) ರೆಸ್ಟೋರೆಂಟ್ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

ಹೊಡಿಬಂಗ್ಲಾ (Hodibangla) ಪ್ರದೇಶದಲ್ಲಿರುವ ಈ ನಾನ್‍ವೆಜ್ ರೆಸ್ಟೋರೆಂಟ್‍ನಲ್ಲಿ ಮಾಂಸಾಹಾರ (Non-veg) ಹೆಸರಿನಲ್ಲಿ ದನದ ಮಾಂಸ ಬಡಿಸಲಾಗುತ್ತಿದೆ ಎಂದು ಹಿಂದೂ ಸಂಘಟನೆಯ (Hindu Organisations) ಮೂವರು ವ್ಯಕ್ತಿಗಳು ಮಾಹಿತಿ ನೀಡಿದ್ದರು. ಈ ವಿಚಾರವಾಗಿ ತನಿಖೆ ಆರಂಭಿಸಿ ದೃಢಪಡಿಸಿಕೊಂಡು, ಈ ವಿಚಾರವನ್ನು ಲಾಲ್‍ಗೇಟ್(Lalgate) ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. 

ಸೆಪ್ಟೆಂಬರ್ 11 ರಂದು ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿ ಫ್ರಿಡ್ಜ್‌ನಲ್ಲಿ 6 ಚೀಲಗಳಲ್ಲಿ ಇರಿಸಲಾಗಿದ್ದ 60 ಕಿಲೋಗ್ರಾಂಗಳಷ್ಟು ದನದ ಮಾಂಸವನ್ನು ವಶಪಡಿಸಿಕೊಂಡರು. ನಂತರ ಪಶುವೈದ್ಯರನ್ನು ಸ್ಥಳಕ್ಕೆ ಕರೆಸಿ ತಮ್ಮ ಸಮ್ಮುಖದಲ್ಲಿಯೇ ಪರೀಕ್ಷೆಗೆ ಮಾದರಿಗಳನ್ನು ತೆಗೆದುಕೊಂಡು ವಿಧಿ ವೈಜ್ಞಾನಿಕ ಪ್ರಯೋಗಾಲಯಕ್ಕೆ (Forensic Scientific Laboratory) ಪೊಲೀಸರು ಕಳುಹಿಸಿದ್ದಾರೆ.

ಸೆಪ್ಟೆಂಬರ್ 14 ರಂದು ಎಫ್‍ಎಸ್‍ಎಲ್ ವರದಿಯನ್ನು ಸ್ವೀಕರಿಸಿದ ನಂತರ, ಅದು ಗೋಮಾಂಸ ಎಂದು ದೃಢಪಡಿಸಿದ್ದಾರೆ. ಬಳಿಕ ಲಾಲ್‍ಗೇಟ್ ಠಾಣೆ ಪೊಲೀಸರು (Lalgate police station) ಪ್ರಕರಣ ದಾಖಲಿಸಿ ರೆಸ್ಟೋರೆಂಟ್ ಮಾಲೀಕ ಸಫ್ರಾಜ್ ಮೊಹಮ್ಮದ್ ವಜೀರ್ ಖಾನ್ ನನ್ನು ಗುಜರಾತ್ ಪ್ರಾಣಿ ಸಂರಕ್ಷಣಾ ತಿದ್ದುಪಡಿ ಕಾಯ್ದೆಯಡಿ ಬಂಧಿಸಿದ್ದಾರೆ. 

ಇದೀಗ ಸಫ್ರಾಜ್ ಮೊಹಮ್ಮದ್ ವಜೀರ್ ಖಾನ್‍ಗೆ ದನದ ಮಾಂಸ ಪೂರೈಸುತ್ತಿದ್ದ ಮತ್ತೋರ್ವ ಆರೋಪಿ ಅನ್ಸಾರ್ ತಲೆ ಮರೆಸಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter