ಮನೆಯಲ್ಲಿ ನಾಯಿ ಸಾಕುವ ವಿಚಾರಕ್ಕೆ ಜಗಳ- ತಾಯಿ, ಮಗಳು ಆತ್ಮಹತ್ಯೆ
ಬೆಂಗಳೂರು: ಮನೆಯಲ್ಲಿ ನಾಯಿ (Dog) ಸಾಕುವ ವಿಚಾರಕ್ಕೆ ನಡೆದಿದ್ದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾದ ವಿಚಿತ್ರ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ದಿವ್ಯಾ ಹಾಗೂ ಆಕೆಯ ಮಗಳು ಆತ್ಮಹತ್ಯೆ ಮಾಡಿಕೊಂಡವರು. ನಾಯಿ ವಿಚಾರಕ್ಕೆ ಅತ್ತೆ-ಮಾವನ ಜೊತೆ ದಿವ್ಯಾಳಿಗೆ ಜಗಳವಾಗಿದೆ. ಈ ಜಗಳವು ದಿವ್ಯಾ ನೇಣಿಗೆ ಕೊರಳೊಡ್ಡುವ ಮೂಲಕ ಅಂತ್ಯವಾಗಿದೆ. ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದಿವ್ಯಾ ಮನೆಯಲ್ಲಿ ನಾಯಿ ಸಾಕುತ್ತಿದ್ದರು. ಇತ್ತ ಉಸಿರಾಟ (Breathing) ಸಂಬಂಧದ ಕಾಯಿಲೆಯಿಂದ ದಿವ್ಯಾ ಬಳಲುತ್ತಿದ್ದರು. ಈ ಮಧ್ಯೆ ವೈದ್ಯ (Doctor) ರು ಮನೆಯಲ್ಲಿ ನಾಯಿ ಇದ್ದರೆ ಕಾಯಿಲೆ ವಾಸಿಯಾಗಲ್ಲ ಎಂದಿದ್ದರು. ಹೀಗಾಗಿ ನಾಯಿಯನ್ನ ಯಾರಿಗಾದರೂ ನೀಡಿ ಎಂದು ಅತ್ತೆ-ಮಾವನಿಗೆ ದಿವ್ಯಾ ಹೇಳಿದ್ದರು.
ಆದರೆ ನಾಯಿಯನ್ನ ಮನೆಯಿಂದ ಕಳಿಸಲು ಅತ್ತೆ-ಮಾವ ಒಪ್ಪಲಿಲ್ಲ. ಇದೇ ವಿಚಾರಕ್ಕೆ ದಿವ್ಯಾ ಹಾಗೂ ಅತ್ತೆ-ಮಾವನ ನಡುವೆ ಗಲಾಟೆ ನಡೆದಿದೆ. ಇದರಿಂದ ಮನನೊಂದ ದಿವ್ಯಾ ತನ್ನ ಮಗಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ.