ಅರ್ಶ್‌ದೀಪ್ ಪೇಜ್ ಎಡಿಟ್ – ವಿಕಿಪೀಡಿಯಾಗೆ ಸಮನ್ಸ್ ಜಾರಿ ಮಾಡಿದ ಕೇಂದ್ರ
ನವದೆಹಲಿ: ಟೀಂ ಇಂಡಿಯಾ ಸದಸ್ಯ ಅರ್ಶ್‌ದೀಪ್ ಸಿಂಗ್ ಅವರ ಪೇಜ್ ಅನ್ನು ಎಡಿಟ್ ಮಾಡಿದ್ದಕ್ಕೆ ಭಾರತದಲ್ಲಿರುವ ವಿಕಿಪೀಡಿಯಾ ಪ್ರತಿನಿಧಿಗೆ ಕೇಂದ್ರ ಸರ್ಕಾರ ಸಮನ್ಸ್ ಜಾರಿ ಮಾಡಿದೆ.
ಅರ್ಶ್‌ದೀಪ್ ಅವರ ಪುಟದಲ್ಲಿ ಖಾಲಿಸ್ತಾನ ಆಟಗಾರ ಎಂದು ಎಡಿಟ್ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆ ಆಗುತ್ತಿದ್ದಂತೆ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಸಚಿವಾಲಯ ವಿಕಿಪೀಡಿಯಾದ ಭಾರತದ ಪ್ರತಿನಿಧಿಗೆ ಸಮನ್ಸ್ ಜಾರಿ ಮಾಡಿದೆ.
ಭಾನುವಾರ ನಡೆದ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅರ್ಶ್‌ದೀಪ್ ಸುಲಭ ಕ್ಯಾಚನ್ನು ಕೈ ಚೆಲ್ಲಿದ್ದರು. 18ನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಅವರ ಬೌಲಿಂಗ್‌ನಲ್ಲಿ ಆಸಿಫ್ ಅಲಿ ಸಿಕ್ಸ್ ಹೊಡೆಯಲು ಮುಂದಾಗಿದ್ದರು. ಆದರೆ ಮೇಲಕ್ಕೆ ಚಿಮ್ಮಿದ ಬಾಲನ್ನು ಹಿಡಿಯಲು ಅರ್ಶ್‌ದೀಪ್ ವಿಫಲರಾದರು. ಸುಲಭವಾಗಿ ಕ್ಯಾಚ್ ಕೈ ಚೆಲ್ಲಿದ್ದಕ್ಕೆ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿತ್ತು.