ಕಲ್ಲಡ್ಕ: ವೀರಯೋಧರ ಸಾಹಸ ನೆನಪಿಸುವ ಕಾರ್ಗಿಲ್ ವಿಜಯೋತ್ಸವ ದಿನವನ್ನು ಜು.26ರಂದು ಮಂಗಳವಾರ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ಆಚರಿಸಲಾಯಿತು. ಗಣ್ಯ ಅಥಿತಿಗಳಿಂದ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಭೂಸೇನೆಯ ನಿವೃತ್ತ ಸೈನಿಕರಾದ ಜಗನ್ನಾಥ ರೈಇವರು ಮಕ್ಕಳನ್ನು ಸೇನೆಗೆ ಸೇರಲು ಹುರಿದುಂಬಿಸುತ್ತಾ ದೇಶಕ್ಕೆ ಉತ್ತಮ ಪ್ರಜೆಗಳಾಗಿ ಬಾಳುವ ಮೂಲಕ ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿ ಎಂದು ಕಿವಿಮಾತು ಹೇಳಿದರು.


ಇದೇ ವೇಳೆ ಮಾತನಾಡಿದ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ ಶ್ರೀಮಾನ್ ಇವರುಧೈರ್ಯದಿಂದ ಮತ್ತು ಸ್ತೈರ್ಯದಿಂದ ಸೇನೆಗೆ ಸೇರಿ ಈ ದೇಶಕ್ಕಾಗಿ ಹೋರಾಡಿ ಎಂದು ಹರಸಿದರು.

ಈ ಸಂದರ್ಭದಲ್ಲಿ ಜಿನ್ನಪ್ಪ ಶ್ರೀಮಾನ್ ಇವರು ಭಾರತತಾನು ಸ್ನೇಹಕ್ಕೆ ಬದ್ಧ ಸಮರಕ್ಕೂ ಸಿದ್ಧ ಎಂದು ಜಾಗತಿಕ ಮಟ್ಟದಲ್ಲಿ ಸಾಬೀತು ಪಡಿಸಿದ ದಿನವೇ ಕಾರ್ಗಿಲ್ ವಿಜಯ ದಿನ ಕಾರ್ಗಿಲ್ ಪ್ರದೇಶ ಚಳಿಗಾಲದಲ್ಲಿ ಮೈನಸ್ ೪೮ ಡಿಗ್ರಿ ಮೈ ಕೊರೆಯುವ ಚಳಿಯಲ್ಲಿ ಗಡಿಕಾಯುತ್ತಾ ಕಾರ್ಗಿಲ್ ಯುದ್ಧದಲ್ಲಿ ಪ್ರಾಣತೆತ್ತ ಶ್ರೀ ಜಶ್ವೀರ್ ಸಿಂಗ್‌ನ ವೀರ ಕಥೆಯನ್ನು ಹೇಳುತ್ತಾ ಕಾರ್ಗಿಲ್‌ಯುದ್ಧದಲ್ಲಿ ನಡೆದ ಘಟನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಭೂಸೇನೆ ನಿವೃತ್ತ ಯೋಧರಾದ ಶ್ರೀ ಜಗನ್ನಾಥ್ ರೈಅವರನ್ನು ಗೌರವಿಸಲಾಯಿತು. ಇದೇ ವೇಳೆ ವಿಠಲ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಶಟಲ್ ಬ್ಯಾಟ್ಮಿಟನ್ ಸ್ಪರ್ಧೆ ವಿಜೇತರು ಮತ್ತು ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯ ವಿಜೇತರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಶ್ರೀ ನೋಣಯ ಅಕ್ಷರ ದಾಸೋಹದ ಬಂಟ್ವಾಳ ತಾಲೂಕು ನೋಡಲ್ ಅಧಿಕಾರಿಗಳು, ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕರಾದ ಶ್ರೀ ರಮೇಶ್ ಶ್ರೀಮಾನ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಶಾಂಭವಿ ಮಾತಾಜಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ದಿಶಾ ಸ್ವಾಗತಿಸಿ ಜಯಶ್ರೀ ವಂದಿಸಿದಳು. ಸೌಮ್ಯ ಬಿ ಮಾತಾಜಿ ನಿರ್ವಹಿಸಿದರು.
