ಬೆಂಗಳೂರಿನ ಸಂತ ಜೋಸೆಫ್ ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಯಾಗಿ ನೇಮಕಗೊಂಡ ಡಾ.ವಿಕ್ಟರ್ ಲೋಬೊ ಎಸ್. ಜೆ.
ಬಂಟ್ವಾಳ: ಭಾರತದ ಪ್ರಥಮ ಅನುದಾನಿತ ವಿಶ್ವವಿದ್ಯಾನಿಲಯ ಎಂದು ಗುರುತಿಸಿಕೊಂಡ ಬೆಂಗಳೂರಿನ ಸಂತ ಜೋಸೆಫ್ ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಯಾಗಿ ನೇಮಕಗೊಂಡ ಡಾ.ವಿಕ್ಟರ್ ಲೋಬೊ ಎಸ್. ಜೆ. ಇವರನ್ನು ಲೊರೆಟ್ಟೋ ಚರ್ಚ್ ಪಾಲಾನಾ ಮಂಡಳಿ ವತಿಯಿಂದ ಜು.27ರಂದು ಬುಧವಾರ ಸನ್ಮಾನಿಸಲಾಯಿತು. ಧರ್ಮಗುರು ಫ್ರಾನ್ಸಿಸ್ ಕ್ರಾಸ್ತ, ಮುಖ್ಯಶಿಕ್ಷಕ ಜೇಸನ್ ಮೊನಿಸ್, ಪಾಲನಾ ಮಂಡಳಿ ಉಪಾಧ್ಯಕ್ಷ ರೋಯ್ ಕಾರ್ಲೊ, ಕಾರ್ಯದರ್ಶಿ ಆಲ್ವಿನ್ ಪಿಂಟೊ ಇದ್ದರು.
