ಸುದ್ದಿ9 ಮೂಡುಬಿದರೆ: ಪಂಚಾಯಿತಿ ರಸ್ತೆಯನ್ನು ಖಾಸಗಿಯವರು ಬಂದ್ ಮಾಡಿದ್ದಾರೆ ಎಂದು ಆರೋಪಿಸಿ ಬಡಗಮಿಜಾರು ಗ್ರಾಮಸ್ಥರು ಮಂಗಳವಾರ ವಿವಾದಾತ್ಮಕ ಜಾಗದಲ್ಲಿ ಪ್ರತಿಭಟನೆ ನಡೆಸಿದರು.
ಪಂಚಾಯತ್ ಕಚೇರಿ ರಸ್ತೆಯಿಂದ ಪಿದಮಲೆ ಶಾಲೆ ಪರಿಸರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸುಮಾರು ಮೂರು ದಶಕಕ್ಕೂ ಮಿಕ್ಕಿ ಸಾರ್ವಜನಿಕ ಓಡಾಟದ ರಸ್ತೆ ಆಗಿತ್ತೆನ್ನಲಾಗಿದೆ. ಇದರ ಹತ್ತಿರದಲ್ಲೆ ಇರುವ ಖಾಸಗಿ ಜಾಗದಲ್ಲಿ ಜಾಗದ ಮಾಲಿಕರು ಹೊಸ ರಸ್ತೆಯನ್ನು ನಿರ್ಮಿಸಿ ಚಾಲ್ತಿಯಲ್ಲಿದ್ದ ಪಂಚಾಯಿತಿ ರಸ್ತೆಯನ್ನು ಬಂದ್ ಮಾಡಿದ್ದರು. ಪಂಚಾಯಿತಿ ಅನುಮತಿ ಪಡೆಯದೆ ರಸ್ತೆ ಬಂದ್ ಮಾಡಿದ್ದರ ವಿರುದ್ಧ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿ ರಸ್ತೆಗೆ ಕಲ್ಲು ಅಡ್ಡ ಇಟ್ಟು ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ತಹಸೀಲ್ದಾರ್ ಮಹಮ್ಮದ್ ಇಸಾಕ್, ಕಂದಾಯ ನಿರೀಕ್ಷಕ ಸೋಮಶೇಖರ್ ಮಯ್ಯ, ಪಿಡಿಒ ಸಾಯೀಶ್ ಚೌಟ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ರಸ್ತೆಯ ಸ್ವಲ್ಪ ಜಾಗ ಸಕರ್ಾರಿ ಇನ್ನು ಸ್ವಲ್ಪ ಜಾಗ ಪಟ್ಟಾ ಜಾಗವಾಗಿತ್ತು.
ತೆರವಿಗೆ ನಕಾರ: ನಾವು ಹೊಸ ರಸ್ತೆಯನ್ನು ನಿರ್ಮಿಸಿ ಜಾಗದಲ್ಲಿ ಮೊದಲೆ ವಿದ್ಯುತ್ ಕಂಬ, ನೀರಿನ ಪೈಪು ಲೈನ್ ಹಾದು ಹೋಗಿದೆ. ಪಂಚಾಯಿತಿಯ ಮೌಖಿಕ ಅನುಮತಿ ಪಡೆದು ನಮ್ಮ ಖಾಸಗಿ ಜಾಗದ ಪಕ್ಕದಲ್ಲಿ ಹೊಸ ರಸ್ತೆಯನ್ನು ನಿಮರ್ಿಸಿ, ಮೋರಿ ರಚಿಸಿ ಸುಮಾರು 2 ಲಕ್ಷ ರೂಪಾಯಿ ವಿನಿಯೋಗಿಸಿದ್ದೆವು. ಆವಾಗ ಯಾರೂ ವಿರೋಧ ವ್ಯಕ್ತಪಡಿಸಿದವರು ಈಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಪರ್ಯಾಯ ರಸ್ತೆ ಮಾಡಿಕೊಟ್ಟಿದ್ದೇವೆ.ಬಂದ್ ಮಾಡಿದ ರಸ್ತೆ ನಮ್ಮ ಪಟ್ಟಾ ಜಾಗದಲ್ಲಿದ್ದು ವಕೀಲರ ಸಲಹೆಯಂತೆ ನಾವು ಅದನ್ನು ತೆರವುಗೊಳಿಸುವುದಿಲ್ಲ ಎಂದು ಜಾಗದ ಮಾಲಕಿ ತಹಸೀಲ್ದಾರರಲ್ಲಿ ತಿಳಿಸಿದರು.
ಹೊಸ ರಸ್ತೆಯನ್ನು ನಿಮರ್ಿಸುವಾಗ ಪಂಚಾಯಿತಿನಿಂದ ಅಧಿಕೃತ ಅನುಮತಿ ಪಡದುಕೊಂಡಿಲ್ಲ. ಆದ್ದರಿಂದ ನಮಗೆ ಹಳೆ ರಸ್ತೆಯೆ ಬೇಕು. ಒತ್ತುವರಿ ತೆರವುಗೊಳಿಸಬೇಕು ಎಂದು ಪಂಚಾಯಿತಿ ಸದಸ್ಯರಾದ ಬಾಲಕೃಷ್ಣ ದೇವಾಡಿಗ, ರಾಮ್ ಭಟ್, ಬಾಲಕೃಷ್ಣ ಶೆಟ್ಟಿ ಮತ್ತು ಪ್ರಕಾಶ್ ಗೌಡ ಪಟ್ಟು ಹಿಡಿದರು. ಆದರೆ ರಸ್ತೆ ಬಂದ್ ಮಾಡಿದ ಸ್ಥಳ ಖಾಸಗಿ ಜಾಗದಲ್ಲಿರುವುದರಿಂದ ತಹಶಿಲ್ದಾರ್ಗೆ ಕ್ರಮ ಕೈಗೊಳ್ಳುವುದಕ್ಕೆ ಕಾನೂನಿನ ತೊಡಕು ಎದುರಾಗಿತ್ತು. ಮುಂದಿನ ಕ್ರಮಕ್ಕೆ ಎ.ಸಿಯವರ ಗಮನಕ್ಕೆ ತರಲು ಅವರು ನಿರ್ಧರಿಸಿದರು. ಆದರೆ ಜಾಗದ ಮಾಲಕರು ಹತ್ತಿರದ ಸಕರ್ಾರಿ ಜಾಗವನ್ನು ಸಮತಟ್ಟುಗೊಳಿಸಿದ ಹಿನ್ನೆಲೆಯಲ್ಲಿ ಅಲ್ಲಿದ್ದ ಜೆಸಿಬಿ ಮತ್ತು ಹಿತಾಚಿಯನ್ನು ವಶಪಡಿಸಿಕೊಳ್ಳಲಾಯಿತು.

002

002p

002pp

By suddi9

Leave a Reply

Your email address will not be published. Required fields are marked *