ಸುದ್ದಿ9ಮೂಡುಬಿದರೆ: ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್ ಮೂಡುಬಿದರೆಯ 5 ನೇ ತರಗತಿಯ ವಿದ್ಯಾಥರ್ಿ ಪ್ರತ್ಯೂಷ್.ಪಿ. ಚಿನ್ನದ ಪದಕ ಪಡೆದಿದ್ದಾನೆ. ಮಂಗಳೂರಿನ ಯು.ಶ್ರೀನಿವಾಸ ಮಲ್ಯ ಇಂಡೋರ್ ಸ್ಟೇಡಿಯಂ ಲಾಲ್ಬಾಗ್ನಲ್ಲಿ ನ.2 ಮತ್ತು 3 ರಂದು ವೆಸ್ಟನರ್್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ 7 ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟದಲ್ಲಿ ಹುಡುಗರ 12 ವರ್ಷ ವಯೋಮಿತಿಯ 30 ಕೆ.ಜಿ. ಕುಮಿಟೆ ವಿಭಾಗದಲ್ಲಿ ಪ್ರತ್ಯೂಷ್.ಪಿ.ಗೆ ಚಿನ್ನದ ಪದಕ ಪಡೆದಿದ್ದಾರೆ.
ಮೂಡುಬಿದರೆಯ ಮಹಾವೀರ ಕಾಲೇಜು ಅಡಿಟೋರಿಯಂನಲ್ಲಿ ಸೆ.13 ರಂದು ಶೊರಿನ್ ರಿಯೂ ಕರಾಟೆ ಎಸೋಸಿಯೇಶನ್ ಮೂಡುಬಿದರೆ, ಮಹಾವೀರ ಕಾಲೇಜು ಮೂಡುಬಿದರೆ, ಎಂ.ಕೆ.ಅನಂತ್ರಾಜ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್ ಮೂಡುಬಿದರೆ ಇವರು ಆಯೋಜಿಸಿದ 9 ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ 30.ಕೆ.ಜಿ. ಕುಮಿಟೆ ವಿಭಾಗದಲ್ಲಿ ಈತ ಬೆಳ್ಳಿಯ ಪದಕ ಪಡೆದಿದ್ದಾನೆ.
ಈತ ಉದ್ಯಮಿ ಕೆ.ಎನ್.ಪ್ರಕಾಶ್ – ಸುಜಾತ ಪ್ರಕಾಶ್ ದಂಪತಿಯ ಪುತ್ರ ಹಾಗೂ ಶೊರಿನ್ ರಿಯೂ ಕರಾಟೆಯ ಮುಖ್ಯ ಶಿಕ್ಷಕ ನದೀಂ ಅವರ ಶಿಷ್ಯ.

