ಸುದ್ದಿ9ಮೂಡುಬಿದಿರೆ: ವ್ಯಾವಹಾರಿಕ ಚಿಂತನೆ ಹೆಚ್ಚಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸಾಂಸ್ಕೃತಿಕ ಚಿಂತನೆಯ ಕೊರತೆ ಎದ್ದು ಕಾಣುತ್ತಿದೆ. ಕಲೆಯ ಅಗತ್ಯವೇನಿದೆ?ಅದರಲ್ಲೇನು ಸಂಪಾದನೆಯಿದೆ? ಕಲಾವಿದರಿಗೆ ಹುಚ್ಚು ಎನ್ನುವವರು ಹೆಚ್ಚಾಗಿದ್ದಾರೆ. ಹಿತ್ತಲ ಗಿಡ ಮದ್ದಲ್ಲ ಎನ್ನುವಮನೋಭಾವದವರಿಗೆ ಕಲಾವಿದ ಮತ್ತು ಅವನಲ್ಲಿರುವ ಕಲೆಯನ್ನು ಗುರುತಿಸುವ ಶಕ್ತಿ ಇಲ್ಲವಾಗಿರುವುದು ದೇಶದ ದುರಂತ ಎಂದು ಕಾಸರಗೋಡಿನ ಹಿರಿಯ ಚಿತ್ರ ಕಲಾವಿದ ಪಿ.ಎಸ್. ಪುಣಿಂಚಿತ್ತಾಯ ಹೇಳಿದರು. ಅವರು ರವಿವಾರ ಅಪರಾಹ್ನ ಆಳ್ವಾಸ್ ನುಡಿಸಿರಿ 2014 ರ ಅಂಗವಾಗಿ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನವಂಬರ್ 6 ರಿಂದ 9 ರವರೆಗೆ ನಡೆದ ಎಂಟನೇ ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಆಳ್ವಾಸ್ ಚಿತ್ರಸಿರಿಯ ಸಮಾರೋಪ ಸಮಾರಂಭದಲ್ಲಿ 2014ರ ಸಾಲಿನ ‘ಆಳ್ವಾಸ್ ಚಿತ್ರಸಿರಿ’ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ಶಿಕ್ಷಣದ ಜತೆಗೆ ಮಕ್ಕಳನ್ನು ಸಾಂಸ್ಕೃತಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಳೆಸುವುದರಿಂದಾಗಿ ದಕ್ಷಿಣ ಕನ್ನಡ ಪ್ರಗತಿಯನ್ನು ಕಾಣಲು ಸಾಧ್ಯವಾಗಿದೆ ಎಂದ ಅವರು ಕಲಾವಿದರಿಗೆ ಸರಳತೆ,ಸ್ವಾಭಿಮಾನ ಮುಖ್ಯವೇ ಹೊರತು ಅಹಂ ಅಲ್ಲ. ಅವರಲ್ಲಿ ಗುರುಭಕ್ತಿ ಇರುವವರೆಗೆ ಭವಿಷ್ಯವೂ ಉಜ್ಚಲವಾಗಿರುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವರು ಪುಣಿಚಿತ್ತಾಯರಿಗೆ ಶಾಲು, ಹಾರ, ಫಲ ಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರ ಸಹಿತ ರೂ 10 ಸಾವಿರ ಗೌರವ ನಗದು ಒಳಗೊಂಡ ಚಿತ್ರಸಿರಿಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಂ. ಮೋಹನ ಆಳ್ವ ಕಲಾವಿದರು ತಮ್ಮ ಕಲಾಕೃತಿಗಳ ಮೂಲಕ ಸಮಾಜಕ್ಕೆ ನೀಡುತ್ತಿರುವ ಸಂದೇಶ ದೊಡ್ಡದು.ದೇಶದ ಗೌರವ ಹೆಚ್ಚಿಸುವಲ್ಲಿ ಅವರ ಪಾತ್ರವೂ ಗಮನಾರ್ಹವಾದದ್ದು ಎಂದರು. ಚಿತ್ರಕಲಾವಿದರುಗಳ ಪ್ರತ್ಯೇಕ ಸಮ್ಮೇಳನವನ್ನು ಸಂಘಟಿಸುವ ಇರಾದೆ ತಮ್ಮಲ್ಲಿದೆ ಎಂದವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನರ್ಾಟಕ ಬ್ಯಾಂಕಿನ ಆಡಳಿತ ನಿದರ್ೆಶಕ ಪಿ. ಜಯರಾಮ ಭಟ್ ಜೀವನದಲ್ಲಿ ಕಲಾ ಆಸಕ್ತಿ ಬಹಳ ಮುಖ್ಯ ಎಂದರು. ಶಿಬಿರದಲ್ಲಿ ಪಾಲ್ಗೊಂಡ ಕಲಾವಿದರ ಪರವಾಗಿ ರಾಜು ತೇರದಾಳ ಕೊಪ್ಪಳ, ನಾಗೇಶ್ ಎನ್, ಹಾಸನ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಬಿರ ಸಲಹಾ ಸಮಿತಿಯ ಗಣೇಶ್ ಸೋಮಯಾಜಿ ಸಮ್ಮಾನಿತರನ್ನು ಪರಿಚಯಿಸಿದರು. ಡಾ. ಉದಯ್ ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಚಿತ್ರಸಿರಿಯಲ್ಲಿ ಅಂಬರೀಶ್ ಎನ್.ಜಿ. (ಕೋಲಾರ), ಅಮೃತ್ ಎಮ್., ನಾಗರತ್ನ ಎ, ನಯನ, ನೀಲಮ್ಮ ಹೊಸಮನಿ, ಅಶೋಕ ನೆಲ್ಲಗಿ (ಗುಲಬಗರ್ಾ), ಭರತ್ ಕುಮಾರ್ ಡಿ.ಎಸ್. (ಮೈಸೂರು), ಗಣೇಶ್ ಆಚಾರ್ಯ, ಕಿರಣ್ ರಾಥೋಡ್ (ಚಿಕ್ಕಮಂಗಳೂರು), ಗ್ಯಾನಪ್ಪ ಎಂ. ಪಂಪಾಪತಿ ಕೆ. (ಕೊಪ್ಪಳ), ಹನಮಂತ್ ಪಾರಿಸ್ (ಬಿಜಾಪುರ), ಜಗನ್ನಾಥ್ ಬೆಲ್ಲದ್, ಶಿವಾನಂದ ಶ್ಯಾಗೋಟಿ (ಬೆಂಗಳೂರು), ಕೃಷ್ಣ ಕೆ.ಎಮ್., ವಿಜಯ್ ವೈ. (ಗದಗ), ಮುರಳಿ ವಿ. ಎಮ್. (ಮಂಡ್ಯ), ನಾಗರಾಜ್ ಬೆದ್ರೆ (ಚಿತ್ರದುರ್ಗ), ನಾಗರಾಜ್ ಎಮ್. (ಚಿಕ್ಕ ಬಳ್ಳಾಪುರ), ನಾಗರಾಜ್ ಪಿ., ಶಿವ ಹಾದಿಮನಿ, (ಹಾವೇರಿ), ನಾಗರಾಜ್ ಎಸ್. ಸತೀಶ್ ಎಸ್. ರಾವ್ (ಉತ್ತರ ಕನ್ನಡ), ನಾಗರಾಜು ಎಸ್.ಹೆಚ್. (ತುಮಕೂರು), ನಾಗೇಶ್ ಎನ್. (ಹಾಸನ), ಪ್ರಮೋದ್ ಕುಮಾರ್, ಶೈಲಜಾ ಜಲದಾರ್ (ರಾಯಚೂರು), ರಾಚಪ್ಪ ಎನ್. (ಚಾಮರಾಜನಗರ), ರಮೇಶ್ ಆರ್. (ಬಾಗಲಕೋಟೆ), ಸುಮತಿ (ಬೀದರ್), ಉಷಾ ಎಮ್. ಜಿ., (ದಾವಣಗೆರೆ), ಯುಸುಫಾಲಿ ಕೆ. (ಧಾರವಾಡ). ಪವನ ಬಿ. ಆಚಾರ್, ಪ್ರಸಾದ್ ರಾವ್, (ಉಡುಪಿ), ಶರತ್, ವಿಕ್ರಮ್ ಬಿ. ಶೆಟ್ಟಿ, (ದಕ್ಷಿಣ ಕನ್ನಡ) ಭಾಗವಹಿಸಿದ್ದರು.

chitra siri phto

 

By Suddi9

Leave a Reply

Your email address will not be published. Required fields are marked *