ವಿಠಲ ವಿದ್ಯಾ ಸಂಘದ ಶಟಲ್ ಬ್ಯಾಡ್ಮಿಂಟನ್ ಪಂದ್ಯದ ಉದ್ಘಾಟನೆ
ವಿಟ್ಲ: ದ ಕ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ ಮತ್ತು ಸರಕಾರಿ ಪ್ರೌಢ ಶಾಲೆ ಕೇಪುಕಲ್ಲಂಗಳ ಇದರ ಸಂಯುಕ್ತ ಆಶ್ರಯದಲ್ಲಿ ವಿಠಲ ವಿದ್ಯಾ ಸಂಘದ ಒಳಾಂಗಣದಲ್ಲಿ ನಡೆದ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯದ ಉದ್ಘಾಟನೆಯನ್ನು ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಬಾಲಚಂದ್ರ ಕಟ್ಟೆ ನೆರವೇರಿಸಿದರು.
ಮುಖ್ಯ ಶಿಕ್ಷಕಿ ಮಾಲತಿ, ಸಿಪಿಒ ವಿಷ್ಣು ನಾರಾಯಣ, ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಕಿರಣ್ ಕುಮಾರ್ ಬ್ರಹ್ಮಾವರ್, ಪ್ರಶಾತ್ ಚೊಕ್ಕಾಡಿ, ಉಮಾನಾಥ ರೈ, ರಾಜೇಂದ್ರ ರೈ, ಶಂಕರ್, ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.