ಮಂಗಳೂರು: ನಟೋರಿಯಸ್ ಡಾನ್ ಕಲಿ ಯೋಗೀಶನ ಹೆಸರಿನಲ್ಲಿ ಪುತ್ತೂರಿನ ಇಬ್ಬರು ಖ್ಯಾತ ಉದ್ಯಮಿಗಳಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ. ಚಿನ್ನಾಭರಣ ಉದ್ಯಮಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ದುಬೈಯಿಂದ ಕರೆ ಬಂದಿದ್ದು, `ಹಫ್ತಾ ನೀಡದಿದ್ದರೆ ಪ್ರಾಣ ತೆಗೆಯುತ್ತೇವೆ’ ಎಂಬುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.301 ಮತ್ತು 344 ನಂಬರಿನಿಂದ ಪ್ರಾರಂಭವಾಗುವ ನಂಬರಿನಿಂದ ಕರೆ ಬಂದಿದ್ದು, ಕರೆ ಮಾಡಿದವರು ತಾವು ಕಲಿ ಯೋಗೀಶನ ಸಹಚರರು ಎಂಬುದಾಗಿ ಬೆದರಿಸಿರುವ ಬಗ್ಗೆ ದೂರಲಾಗಿದೆ. ಸ್ಥಳೀಯ ಇಬ್ಬರು ಯುವಕರು ಉದ್ಯಮಿಗಳ ನಂಬರ್ ಮತ್ತು ಉದ್ಯಮದ ಕುರಿತ ಮಾಹಿತಿಯನ್ನು ಅಂಡರ್‍ವಲ್ರ್ಡ್ ಡಾನ್‍ಗಳಿಗೆ ನೀಡುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದ್ದು ಈ ಕುರಿತು ತನಿಖೆ ಸಾಗಿದೆ.

