ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ,ಉಡುಪಿ,ಉತ್ತರ ಕನ್ನಡ,ಕೊಡಗು,ಚಿಕ್ಕಮಂಗಳೂರು,ಶಿಮೊಗ್ಗ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಮುಂಗಾರು ತೀವ್ರ ಬಿರುಸಾಗಿದೆ.

ಇನ್ನೂ ಮಳೆಯ ಸಂಭಂದಿತ ಅವಾಂತರಕ್ಕೆ ಇಬ್ಬರು ಬಲಿಯಾಗಿದ್ದು, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಲ್ತೂರಿನಲ್ಲಿ ಕೃಷಿ ಗದ್ದೆಯಲ್ಲಿ ಕೃಷಿಕ ಮಹಿಳೆ ಲಕ್ಷ್ಮಿ ಪೂಜಾರ್ತಿ(66) ಮತ್ತು ಚಿಕ್ಕಮಗಳೂರು ಜಿಲ್ಲೆಯ ಹೊಸಪೇಟೆಯಲ್ಲಿ ಸುಪ್ರಿತಾ ಎಂಬ ಬಾಲಕಿ ಶಾಲೆಯಿಂದ ವಾಪಾಸ್ ಮನೆಗೆ ತೆರಳುತ್ತಿರುವಾಗ ಹಳ್ಳದಲ್ಲಿ ಕೊಚ್ಚಿಹೋಗಿದ್ದಾಳೆ ಎನ್ನಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹಳದಿಪುರದಲ್ಲಿ ಮನೆಯೊಂದರ ಮೇಲೆ ಬೃಹತ್ ಮರ ಉರುಳಿಬಿದ್ದು ಮನೆಯಲ್ಲಿದ್ದ ಆರು ಮಂದಿ ಗಾಯಗೊಂಡಿದ್ದಾರೆ.ಚಿಕ್ಕಮಗಳೂರಿನಲ್ಲಿಯೂ ಮಳೆಯ ಅಬ್ಬರ ಹೆಚ್ಚಿದೆ.ಭದ್ರಾವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಭಾನುವಾರ ರಾತ್ರಿಯಿಂದೀಚೆಗೆ ಮಳೆ ಬಿರುಸುಗೊಂಡಿದ್ದು ನೇತ್ರಾವತಿ ಕುಮಾರದಾರ ಸೇರಿದಂತೆ ಎಲ್ಲ ನದಿಗಳಲ್ಲಿ ನೀರಿನಮಟ್ಟ ದಿಡೀರನೆ ಏರಿಕೆಯಾಗಿದೆ.

ಕುಕ್ಕೆ ಸುಬ್ರಮಣ್ಯದಲ್ಲಿ ಕುಮಾರಧಾರ ನದಿ ಪ್ರವಾಹದ ಮಟ್ಟದಲ್ಲಿ ಹರಿಯುತ್ತಿದ್ದು ಕ್ಷೇತ್ರದ ಸ್ನಾನ ಘಟ್ಟ ಮುಳುಗಡೆಯಾಗಿದೆ.ಕೊಡಗು ಜಿಲ್ಲೆಯಲ್ಲೂ ಬಾರಿ ಮಳೆ ಮುಂದುವರೆದಿದ್ದು ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ.ಪರಿಣಾಮವಾಗಿ ಭಾಗಮಂಡಲ-ನಾಪೋಕ್ಲು ರಸ್ತೆ ಮೇಲೆ ನೀರು ಹರಿಯುತ್ತಿದ್ದು ರಸ್ತೆ ಸಂಚಾರ ಕಡಿತಗೊಂದಿದೆ. ಮಡಿಕೇರಿ-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಆತಂಕ ಎದುರಾಗಿದೆ.ಈಗಾಗಲೇ ಮಡಿಕೇರಿ ಸಮೀಪದ ತಾಳತ್ತಮನೆ ವ್ಯಾಪ್ತಿಯಲ್ಲಿ 30 ಅಡಿ ಎತ್ತರ ಗುಡ್ಡೆ ಕುಸಿತವಾಗಿದ್ದು,ಸಣ್ಣ ಪ್ರಮಾಣದ ಮಣ್ಣು ರಸ್ತೆಗೆ ಅಡ್ಡಲಾಗಿ ಬಿದ್ದಿದೆ.

By Suddi9

Leave a Reply

Your email address will not be published. Required fields are marked *