ಮಂಗಳೂರು: ದೇಶದಲ್ಲಿ ಮುಸಲ್ಮಾನರಿಗೆ ಕೊಡುವ ಮದರಸ ಶಿಕ್ಷಣದಿಂದಲೇ ಕೇಡುಂಟಾಗುತ್ತಿದೆ. ಮದರಸದಲ್ಲಿ ನೀಡುವಂತಹ ಶಿಕ್ಷಣದಿಂದಾಗಿ ದೇಶದಲ್ಲಿ ಬೆಳವಣಿಗೆ ಆಗುತ್ತಿದೆ. ಹಾಗಾಗಿ, ದೇಶದಲ್ಲಿ ಮದರಸ ಶಿಕ್ಷಣಕ್ಕೆ ನಿರ್ಬಂಧ ಹೇರಿ, ಬ್ಯಾನ್ ಮಾಡಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸುವುದಾಗಿ ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪೈಲ್ ಹೇಳಿದ್ದಾರೆ.
ಉದಯಪುರದ ಯುವಕನ ಶಿರಚ್ಛೇದ ಘಟನೆಯನ್ನು ಖಂಡಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಜರಂಗದಳ, ವಿಹಿಂಪ ವತಿಯಿಂದ ಪ್ರತಿಭಟನೆ ನಡೆಯಿತು. ದೇಶದಲ್ಲಿ ಸಾಕಷ್ಟು ಹಿಂದುಗಳ ಹತ್ಯೆ ಆಗಿದೆ, ಕರ್ನಾಟಕದಲ್ಲೂ ಆಗಿದೆ, ನಿನ್ನೆ ರಾಜಸ್ಥಾನದಲ್ಲಿ ಆಗಿರುವ ಹತ್ಯೆಯನ್ನು ಮಾತ್ರ ನಮ್ಮ ಜೀವಮಾನದಲ್ಲಿ ನೋಡಿಲ್ಲ. ಮಾಂಸ ಕಡಿಯುವ ಕತ್ತಿಯಿಂದ ಹತ್ಯೆ ಮಾಡಿ, ವಿಡಿಯೋ ಮಾಡಿದ್ದು ಅಲ್ಲದೇ, ನೂಪೂರ್ ಶರ್ಮಾಳ ಪರವಾಗಿ ವಿಡಿಯೋ ಹಾಕಿದ್ದಕ್ಕೆ ಮಾಡಿದ್ದು ಅಂತಾ ಸಮರ್ಥನೆ ಮಾಡಿಕೊಂಡಿದ್ದಾರೆ.
ದೇಶದಲ್ಲಿ ಕೆಲವೆಡೆ ಮುಸಲ್ಮಾನರು ಶಾಂತಿದೂತರು ಎಂದು ಹೇಳಿಕೊಳ್ಳುತ್ತಾರೆ. ಜಾತ್ಯತೀತ ನೆಪದಲ್ಲಿ ಅವರನ್ನು ಸಮರ್ಥನೆ ಮಾಡುತ್ತಾರೆ. ನಮ್ಮನ್ನು ಟೆರರಿಸ್ಟ್ ಅಂತಾ ಕರೀತಾರೆ, ನಾವು ಅಂಬೇಡ್ಕರ್ ಸಂವಿಧಾನ ಪಾಲಿಸುವುದು ಎಂದು ಸಾರಿ ಸಾರಿ ಹೇಳುತ್ತಾರೆ. ಆದರೆ ಇವರು ಮಾಡುತ್ತಿರುವ ಕೃತ್ಯಗಳೇ ಇವರೆಷ್ಟು ಕ್ರೂರಿ ಎಂದು ತೋರಿಸುತ್ತದೆ. ದೇಶದಲ್ಲಿ ನಡೆಯುವ ಅಶಾಂತಿಗೆ ಇಸ್ಲಾಂ ಕಾರಣ ಎಂದೇ ನಾವು ಹೇಳುತ್ತೇವೆ, ಇಸ್ಲಾಂ ಶಾಂತಿಯ ಸಂಕೇತವಲ್ಲ, ಇಸ್ಲಾಂ ಹಿಂದುಗಳ ಹತ್ಯೆಗೆ ಹುಟ್ಟಿರುವುದು ರಸ್ತೆ ಬದಿ ನಿಂತು ಪ್ರತಿಭಟಿಸುತ್ತಾ ಇದ್ದೇವೆ. ನಾವು ಯಾವುದಾದರೂ ವಿರುದ್ಧ ಧ್ವನಿ ಎತ್ತಿದರೆ, ನಾವು ಅಂಬೇಡ್ಕರ್ ವಿರುದ್ಧ ಸಂವಿಧಾನದ ವಿರುದ್ಧ ಅಂತಾ ಹೇಳುತ್ತಾರೆ.
ಹಾಗೆ ನೋಡಿದರೆ ಇವತ್ತು ದೇಶದಲ್ಲಿ ಬೆಂಕಿ ಬೀಳಬೇಕಿತ್ತು, ಇವತ್ತು ಹಿಂದುಗಳ ಕೈ ಕಟ್ಟಿ ಹಾಕಿದ್ದು ಇದೇ ಸಂವಿಧಾನ, ಕಾನೂನು, ಪ್ರಜಾಪ್ರಭುತ್ವ ಈ ಸಂವಿಧಾನದ ನಿಯಮಗಳು ಇಲ್ಲಿನ ಮುಸಲ್ಮಾನರಿಗೆ ಇಲ್ಲ. ಇವರು ಪೊಲೀಸರ ಮೇಲೆ ಹಲ್ಲೆ ಮಾಡುತ್ತಾರೆ, ದೇವಸ್ಥಾನಕ್ಕೆ ಹಾನಿ ಮಾಡುತ್ತಾರೆ, ಇದನ್ನು ಯಾರು ಪ್ರಶ್ನೆ ಮಾಡುವ ಹಾಗೇ ಇಲ್ಲ. ಇದಕ್ಕಾಗಿ ನಾವು ನಮ್ಮ ಸಾಧು ಸಂತರಿಗೆ, ಸ್ವಾಮೀಜಿಗಳಿಗೆ ಹೇಳುತ್ತಾ ಇದ್ದೇವೆ, ಸ್ವಾಮಿ ವಿವೇಕಾನಂದರ ರೀತಿ ಹಿಂದುಗಳಿಗೆ ಕರೆ ಕೊಡಿ, ತಾಯಂದಿರು ಮಕ್ಕಳಿಗೆ ಹೇಳಬೇಕು, ಛತ್ರಪತಿ ಶಿವಾಜಿಗೆ ಹೇಳಿದ ಹಾಗೇ ಎಲ್ಲರೂ ರಸ್ತೆಗೆ ಇಳಿಯಿರಿ, ಹೋರಾಟ ಮಾಡಿ. ಈ ಘಟನೆಯನ್ನು ಖಂಡಿಸಿ ಎಂದು ಶರಣ್ ಪಂಪೈಲ್ ಕರೆ ನೀಡಿದರು.
ಅಲ್ಲದೆ, ಇವರಿಗೆ ಹಿಂಸೆಯಿಂದ ಉತ್ತರ ಬೇಕೆಂದರೆ, ತಲವಾರಿನಿಂದಲೇ ಉತ್ತರ ಬೇಕೆಂದರೆ ಅದೇ ರೀತಿಯ ಉತ್ತರ ಕೊಡುವ ಅನಿವಾರ್ಯತೆ ಎದುರಾಗಿದೆ ಎನ್ನುವುದನ್ನು ಕಾರ್ಯಕರ್ತರಿಗೆ ಹೇಳಬಯಸುತ್ತೇನೆ. ನಾಳೆಯಿಂದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಇದೇ ರೀತಿ ಪ್ರತಿಭಟನೆ ನಡೆಸಲಾಗುವುದು ಎಂದು ಶರಣ್ ಪಂಪೈಲ್ ಹೇಳಿದ್ದಾರೆ.
