ಸುಳ್ಯದಲ್ಲಿ ಮತ್ತೆ ಅದುರಿದ ಭೂಮಿ : ಭೂಕಂಪದಿಂದ ಜನರಲ್ಲಿ ತೀವ್ರ ಆತಂಕ, ಏನೋ ವಿಚಿತ್ರ ಸದ್ದಿನೊಂದಿಗೆ ಕಂಪನ !
ಮಂಗಳೂರು: ದಕ್ಷಿಣ ಕನ್ನಡ ಕೊಡಗು ಗಡಿಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸುಳ್ಯ ತಾಲೂಕಿನ ಸಂಪಾಜೆ, ಗುತ್ತಿಗಾರು, ಶಾಂತಿನಗರ ಭಾಗದಲ್ಲಿ ಮತ್ತೆ ಕಂಪನದ ಅನುಭವ ಆಗಿದೆ.
ಬೆಳಗ್ಗೆ 7.45ರ ಸುಮಾರಿಗೆ ಕೆಲಹೊತ್ತು ಭೂಮಿ ಅದುರಿದ ರೀತಿ ಕಂಪನದ ಅನುಭವ ಉಂಟಾಗಿದ್ದು ಜನರು ಆತಂಕಗೊಂಡು ಮನೆಯಿಂದ ಹೊರಗೋಡಿ ಬಂದಿದ್ದಾರೆ. ಮನೆಯಲ್ಲಿನ ಪಾತ್ರೆಗಳು, ಮನೆ ಮೇಲಿನ ಹಂಚು, ಶೀಟ್ ಗಳು
ಅದುರಿದಂತೆ ಸದ್ದು ಮಾಡಿದೆ. ಬೈಕಿನಲ್ಲಿದ್ದವರು ಕುಳಿತಲ್ಲೇ ನೆಲ ಅದುರಿದ ಅನುಭವಕ್ಕೆ ಒಳಗಾಗಿದ್ದಾರೆ. ಎರಡು ದಿನಗಳ ಹಿಂದೆ ಸುಳ್ಯ ತಾಲೂಕಿನ ಗಡಿಭಾಗ ಸಂಪಾಜೆ ಮತ್ತು ಇನ್ನಿತರ ಹಲವು ಕಡೆ ಬೆಳಗ್ಗೆ 9.10ರ ಸುಮಾರಿಗೆ ಕಂಪನ ಆಗಿತ್ತು. ಕೊಡಗಿನ ಹಲವೆಡೆಯೂ ಕಂಪನ ಉಂಟಾಗಿತ್ತು. ಇದೀಗ ಇಂದು ಬೆಳಗ್ಗೆ ಅದೇ ರೀತಿ ಏನೋ ವಿಚಿತ್ರ ಸದ್ದಿನೊಂದಿಗೆ ಭೂಕಂಪನ ಉಂಟಾಗಿದೆ. ಜನರಲ್ಲಿ ತೀವ್ರ ಆತಂಕ ಉಂಟಾಗಿದೆ. ಮನೆಯ ಎದುರಲ್ಲಿದ್ದ ಶೀಟ್ ಹನಿ ಮಳೆಯ ನಡುವೆ ಜರನೆ ಅದುರಿ ಸದ್ದು ಮಾಡಿದ್ದು ಸಂಪಾಜೆಯ ಮನೆಯೊಂದರ ಸಿಸಿಟಿವಿಯಲ್ಲಿ ದಾಖಲಾಗಿದೆ. ಭಾನುವಾರದ ಕಂಪನ ತೀವ್ರತೆ ಇತ್ತು.