ವಿಟ್ಲ ಜಿಲ್ಲಾ ದಲಿತ್ ಸೇವಾ ಸಮಿತಿಯ ವತಿಯಿಂದ ಮಕ್ಕಳೊಂದಿಗೆ ವಿಶೇಷ ಕಾನೂನು ಅರಿವು ಸಂವಾದ ಕಾರ್ಯಕ್ರಮ
ವಿಟ್ಲ: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ವತಿಯಿಂದ ವಿಟ್ಲ ಪೊಲೀಸ್ ಠಾಣಾ ಅಧಿಕಾರಿಗಳೊಂದಿಗೆ ಸಂಘಟನೆಯ ಸದಸ್ಯರ ಸುಮಾರು ಐವತ್ತು ಮಕ್ಕಳೊಂದಿಗೆ ವಿಶೇಷ ಕಾನೂನು ಅರಿವು ಸಂವಾದ ಕಾರ್ಯಕ್ರಮ ನಡೆಯಿತು. ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂದೀಪ್ ಶೆಟ್ಟಿ, ಪ್ರೊಬೆಶನರಿ ಅಧಿಕಾರಿಗಳಾದ ಧನಂಜಯ, ಜಯಶ್ರೀ ಮತ್ತು ಸಿಬ್ಬಂದಿ ಸವಿತಾ ಇವರು ಕಾರ್ಯಾಗಾರ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮೆಸ್ಕಾಂ ಉಕ್ಕುಡ ಶಾಖಾಧಿಕಾರಿ ಆನಂದ್ ಸರಕಾರ ಜಾರಿ ಮಾಡಿದ ಪ.ಜಾತಿ ಪಂಗಡದವರಿಗೆ ವಿದ್ಯುತ್ ಬಳಕೆಯಲ್ಲಿ ೭೫ ಯೂನಿಟ್ ರಿಯಾಯಿತಿ ಬಗ್ಗೆ ಮಾಹಿತಿ ನೀಡಿದರು. ಜಯಶ್ರೀ ಕಡಬ ಸ್ವಸಹಾಯ ಗುಂಪು ರಚನೆ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ದಲಿತ್ ಸೇವಾ ಸಮಿತಿ ಬಂಟ್ವಾಳ ಘಟಕದ ವಿದ್ಯಾರ್ಥಿ ಸಂಘ ರಚನೆ ಮಾಡಲಾಯಿತು
ಅಧ್ಯಕ್ಷ ಗಣೇಶ್ ಸುರುಳಿಮೂಲೆ, ಉಪಾಧ್ಯಕ್ಷೆ ಗೌತಮಿ ಸೀಗೆಬಲ್ಲೆ, ಕಾರ್ಯದರ್ಶಿ ಧನುಶ್ ಪೆರುವಾಯಿ, ಜತೆಕಾರ್ಯದರ್ಶಿ ಕಾರ್ತಿಕ್ ಕನ್ಯಾನ, ಖಜಾಂಚಿ ಶ್ರೇಯ, ಗೌರವಾಧ್ಯಕ್ಷ ಪ್ರವೀಣ್, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರತೀಕ್ಷಾ, ರಾಜೇಶ್ವರಿ, ದಿವ್ಯಾ, ಯಕ್ಷಿತ್, ಪವನ್ ಕುಮಾರ್, ದೀಕ್ಷಿತ್, ಸಾಕ್ಷಿ, ಪ್ರಯಾ ಪಲ್ಲವಿ, ಸಮನ್ವಿತ್, ಹರ್ಷಿತಾ ಮತ್ತು ಪವಿತ್ರಾ ಇವರನ್ನು ಸಂಘಟನೆಯ ಸ್ಥಾಪಕಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ಜಿಲ್ಲಾಧ್ಯಕ್ಷ ಚಂದ್ರಶೇಖರ ಯು ವಿಟ್ಲ ಇವರ ನೇತೃತ್ವದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡ ಲಾಯಿತು.