ವಿಶ್ವ ಯೋಗ ದಿನದ ಅಂಗವಾಗಿ ಉಚಿತ ಯೋಗಾಸನ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿರ
ವಿಟ್ಲ: ವಿಶ್ವ ಯೋಗ ದಿನದ ಅಂಗವಾಗಿ ಯಕ್ಷ ಭಾರತ ಸೇವಾ ಪ್ರತಿಷ್ಠಾನ ವಿಟ್ಲ ಇದರ ವತಿಯಿಂದ ಚಂದಳಿಕೆ ಭಾರತ ಆಡಿಟೋರಿಯಂನಲ್ಲಿ ಒಂದು ವಾರದ ತನಕ ನಡೆಯುವ ಉಚಿತ ಯೋಗಾಸನ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿರವನ್ನು ವಿಡ್ಲದ ಸುರಕ್ಷಾ ಹೆಲ್ತ್ ಸೆಂಟರಿನ ಡಾ| ಗೀತಪ್ರಕಾಶ್ ಉದ್ಘಾಟಿಸಿದರು. ಅಳಿಕೆ ಸತ್ಯಸಾಯಿ ವಿದ್ಯಾ ಸಂಸ್ಥೆಯ ಯೋಗ ಗುರು ಆನಂದ ಶೆಟ್ಟಿ ಯೋಗಾಸನ ತರಬೇತಿ ನೀಡಿದರು. ಯಕ್ಷ ಭಾರತದ ಸಂನೀವ ಪೂಜಾರಿ, ವಿಶ್ವನಾಥ ಗೌಡ, ಹರೀಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.