ಬಂಟ್ವಾಳ: ೧೭ ಕಾಮಗಾರಿ ಮಾಜಿ ಸಚಿವ ರೈ ಸಾಧನೆ
ಬಂಟ್ವಾಳ: ಬಿ.ಸಿ.ರೋಡು ಮಿನಿ ವಿಧಾನಸೌಧ ಕಟ್ಟಡ ನಿಮಾಣ ಸೇರಿದಂತೆ ಕಳೆದ ೪ ವರ್ಷಗಳ ಹಿಂದೆ ಒಟ್ಟು ೧೭ ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಮಾಜಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದ್ದಾರೆ. ಬಿ.ಸಿ.ರೋಡು ಸರ್ಕಾರಿ ಬಸ್ ನಿಲ್ದಾಣ ಮತ್ತು ಡಿಪೋ, ಮೆಸ್ಕಾಂ ಕಟ್ಟಡ, ಅಂಬೇಡ್ಕರ್ ಭವನ, ಬಂಟ್ವಾಳ ಪಂಜೆ ಮಂಗೇಶರಾಯ ಭವನ, ಪ್ರವಾಸಿ ಮಂದಿರ, ಲೋಕೋಪಯೋಗಿ ಇಲಾಖೆ ಕಟ್ಟಡ, ಸರ್ಕಾರಿ ಪಾಲಿಟೆಕ್ನಿಕ್, ೧೦ಒ ಹಾಸಿಗೆ ಆಸ್ಪತ್ರೆ, ಎರಡು ಪಾರ್ಕ ನಿಮಾಣ ಸಹಿತ ಬಿ.ಸಿ.ರೋಡು -ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತಿತರ ಪ್ರಮುಖ ೧೭ ಕಾಮಗಾರಿಗಳು ಜನ ಮಾನಸದಲ್ಲಿ ಉಳಿಯುವಂತಹ ಸಾಧನೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸೇವಾದಳ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.