Published On: Mon, Jun 20th, 2022

ವಿಟ್ಲ ಮುಖ್ಯ ಗುರುಗಳಾಗಿ ಭಡ್ತಿಹೊಂದಿದ 5ಶಿಕ್ಷಕರ ಬೀಳ್ಕೊಡುಗೆ ಸಮಾರಂಭ

ವಿಟ್ಲ: ಮುಖ್ಯ ಗುರುಗಳಾಗಿ ಭಡ್ತಿಹೊಂದಿದ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 5 ಶಿಕ್ಷಕರ ಬೀಳ್ಕೊಡುಗೆ ಸಮಾರಂಭವು ಜೂ.18ರಂದು ಶನಿವಾರ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಗೌರವಾಧ್ಯಕ್ಷರಾದ ಶ್ರೀ ಸುಬ್ರಾಯ ಪೈಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ರಮೇಶ್ ಆಳ್ವ , ಶ್ರೀಮತಿ ಶಾರದ ವಹಿಸಿದ್ದರು.SHV_1692

ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಭಡ್ತಿಹೊಂದಿದ ದೇವಕಿ ಅಮ್ಮ, ಜಯಂತಿ ಕೆ, ಬಾಬು ನಾಯ್ಕ ಕೆ, ಸಂತೋಷ್ ಎಸ್, ಗೀತಾ ಎಸ್ ಇವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಎಸ್.ಎಸ್.ಎಲ್ ಸಿ ಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಪ್ರತೀಕ್ಷಾ, ಲಾವಣ್ಯ , ಜ್ಞಾನವಿ, ಯಕ್ಷಿತಾ , ಆಯಿಷತ್ ಸಾನಿಫ,ಅಹಮ್ಮದ್ ಮಿಸ್ ಬಾಹ್, ಶಿಫಾನ, ಗೀತಾಂಜಲಿ, ಇವರನ್ನು ಸನ್ಮಾನಿಸಲಾಯಿತು.ಶ್ರೀಮತಿ ಪ್ರೇಮಲತಾ ಪಿ ಇವರು ಸ್ವಾಗತಿಸಿದರು. ಭವಿತಾ ಕೆ ಎ ವಂದಿಸಿದರು. ಅರುಣ ವಿ, ಹಾಗೂ ವಿನೋದ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter