ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಅಣ್ಣಳಿಕೆಯಲ್ಲಿ ೭ನೇ ಶಾಖೆ ಆರಂಭ
ಬಂಟ್ವಾಳ: ತಾಲ್ಲೂಕಿನ ಸಜಿಪಮುನ್ನೂರು ಮೂತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಅಣ್ಣಳಿಕೆಯಲ್ಲಿ ಭಾನುವಾರ ಆರಂಭಗೊಮಡ ೭ನೇ ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿದರು. ಮಾಜಿ ಸಚಿವ ಬಿ.ರಮಾನಾಥ ರೈ, ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಇದ್ದಾರೆ.
ಗ್ರಾಮೀಣ ಜನರ ಕುಲಕಸುಬು ಮೂರ್ತೆದಾರಿಕೆ ಲಾಭದಾಯಕ ಉದ್ಯಮವನ್ನಾಗಿಸಲು ಆಧುನಿಕ ತಂತ್ರಜ್ಞಾನ ಸ್ಪರ್ಶ ನೀಡುವ ಅವಶ್ಯಕತೆ ಇದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ಸಜಿಪಮುನ್ನೂರು ಮೂತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಅಣ್ಣಳಿಕೆಯಲ್ಲಿ ಭಾನುವಾರ ಆರಂಭಗೊಮಡ ೭ನೇ ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವ ಬಿ. ರಮಾನಾಥ ರೈ ನೂತನ ಶಾಖೆ ಉದ್ಘಾಟಿಸಿ ಮಾತನಾಡಿ, ಈ ಮೂರ್ತೆದಾರರ ಸಹಕಾರಿ ಸಂಘವು ಗ್ರಾಮೀಣ ಜನತೆಗೆ ಆರ್ಥಿಕ ಶಕ್ತಿಯಾಗಿ ನೆರವು ನೀಡುತ್ತಿದೆ. ಕಳೆದ ಸಾಲಿನಲ್ಲಿ ರೂ ೮೫ ಕೋಟಿ ಮೊತ್ತದ ವ್ಯವಹಾರ ನಡೆಸಿರುವುದು ಇದಕ್ಕೆ ಸಾಕ್ಷಿ ಆಗಿದೆ ಎಂದರು.
ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ೨೫ ಶಾಖೆ ತೆರೆಯುವ ಗುರಿ ಹೊಂದಿದೆ. ೭ ಶಾಖೆಗಳಲ್ಲಿ ೨೦ ಮಂದಿ ಗ್ರಾಮೀಣ ಯುವತಿಯರಿಗೆ ಉದ್ಯೋಗ ನೀಡಿದೆ ಎಂದರು.
ಕಟ್ಟಡ ಮಾಲೀಕ ವಸಂತ ಕುಮಾರ್ ಅಣ್ಣಳಿಕೆ ಗಣಕಯಂತ್ರ ಮತ್ತು ಜಿಲ್ಲಾ ಮೂರ್ತೆದಾರರ ಮಹಾಮಂಡಲದ ನಿರ್ದೇಶಕಿ ಉಷಾ ಅಂಚನ್ ಭದ್ರತಾ ಕೊಠಡಿ ಉದ್ಘಾಟಿಸಿದರು. ಅರಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಪ್ರಮುಖರಾದ ಎಂ.ಪದ್ಮರಾಜ್ ಬಳ್ಳಾಲ್ ಮಾವಂತೂರು, ಮಾರಪ್ಪ ಕುಲಾಲ್, ಎಂ.ದುಗಾದಾಸ್ ಶೆಟ್ಟಿ, ಮಾವಂತೂರು, ಎಂ.ಬಿ.ಅಶ್ರಫ್ ಅರಳ, ಅವಿಲ್ ಮಿನೇಜಸ್ ಲೊರೆಟ್ಟೋ, ಸಂತೋಷ್ ಕುಮಾರ್ ಚೌಟ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಬಿ.ವಿಶ್ವನಾಥ ಪೂಜಾರಿ ಬಿ.ಸಿ.ರೋಡು, ರಾಜೇಶ್ ಸುವರ್ಣ ಬಿ.ಸಿ.ರೋಡು, ಡಾ.ಗೋಪಾಲಕೃಷ್ಣ ಆಚಾರ್ಯ, ಸುಧಾಕರ ಆಚಾರ್ಯ ಮಾರ್ನಬೈಲು, ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾದ ಅಶೋಕ ಪೂಜಾರಿ ಕೋಮಾಲಿ, ವಿಠಲ ಬೆಳ್ಚಡ ಚೇಳೂರು, ಕೆ.ಸುಜಾತ ಎಂ., ವಾಣಿ ವಸಂತ, ಸಿಇಒ ಮಮತಾ ಜಿ., ಶಾಖಾಧಿಕಾರಿ ಅಶ್ವಿನಿ ಕಿರಣ್, ಮೂರ್ತೆದಾರರ ಮಹಾಮಂಡಲ ಸಿಇಒ ಕಿಶೋರ್ ದೇರಾಜೆ, ದಿನೇಶ್ ಸುಂದರ ಶಾಂತಿ, ಜನಾರ್ದನ ಶಾಂತಿ, ಜಗದೀಶ ಕೊಯಿಲ, ವೆಂಕಪ್ಪ ಪೂಜಾರಿ, ಅರುಣ್ ಕುಮಾರ್ ಕಾರಂಬಡೆ ಮತ್ತಿತರರು ಇದ್ದರು. ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ ಸ್ವಾಗತಿಸಿ, ಜಯಶಂಕರ್ ಕಾನ್ಸಾಲೆ ವಂದಿಸಿದರು. ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.