ಬಂಟ್ವಾಳ: ಸಮಾಜ ಬದಲಾವಣೆಯಾಗಬೇಕು. ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕು. ಕನಕದಾಸರಂತಹ ಸಂತ ಶ್ರೇಷ್ಠರ ಜೀವನಾದರ್ಶಗಳನ್ನು ಅಥರ್ೈಸಿಕೊಂಡು ಮುಂದೆ ಸಾಗಿದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಹೇಳಿದರು.
B-Ramanath-Rai
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಬಿ.ಸಿ.ರೋಡಿನ ಎಸ್ಜೆಎಸ್ಆರ್ವೈ ಸಭಾಂಗಣದಲ್ಲಿ ಶನಿವಾರ ನಡೆದ ಬಂಟ್ವಾಳ ತಾಲೂಕು ಮಟ್ಟದ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಇತಿಹಾಸವನ್ನು ತಿಳಿದುಕೊಳ್ಳದೆ ಯಾರು ಮುಂದೆ ಹೋಗಲು ಸಾಧ್ಯವಿಲ್ಲ. ಸಾಮಾಜಿಕ ಬದಲಾವಣೆಯಿಂದಾಗಿಯೇ ಐದು ಮಂದಿ ಹಿಂದುಳಿದ ವರ್ಗದ ವ್ಯಕ್ತಿಗಳು ಈ ರಾಜ್ಯದ ಮುಖ್ಯಮಂತ್ರಿಗಳಾಗಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.
ತುಂಬೆ ಬಿ.ಎ.ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದಿನೇಶ್ ಶೆಟ್ಟಿ ಪ್ರಧಾನ ಭಾಷಣ ಮಾಡಿ ಜಾತಿಗಿಂತ ನೀತಿ ಮುಖ್ಯ ಎಂಬುದನ್ನು ತನ್ನ ಕೀರ್ತನೆಯ ಮೂಲಕ ಸಾರ್ವತ್ರಿಕರಣಗೊಳಿಸಿದವರು ಕನಕದಾಸರು. ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಿಸುವ ಮೂಲಕ ಅವರ ಜೀವಾನದರ್ಶಗಳನ್ನು ತಿಳಿದುಕೊಂಡು ನಾವು ಬದುಕಿನಲ್ಲಿ ಅನುಸರಿಸ ಬೇಕು ಎಂದರು. ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ವಸಂತಿ ಸಿ, ತಾ.ಪಂ.ಉಪಾಧ್ಯಕ್ಷೆ ವಿಲಾಸಿನಿ, ಜಿ.ಪಂ.ಸದಸ್ಯರಾದ ಮಮತಾ ಗಟ್ಟಿ, ಚೆನ್ನಪ್ಪ ಕೋಟ್ಯಾನ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್ ಮಹಮ್ಮದ್, ತಾ.ಪಂ.ಕಾರ್ಯನಿವರ್ಾಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಹಶೀಲ್ದಾರ್ ಮಲ್ಲೇಸ್ವಾಮೀ ಸ್ವಾಗತಿಸಿದರು, ಮಂಜು ವಿಟ್ಲ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *