ಸಜಿಪ: ಗಾಂಜಾ ಸೇವನೆ, ಆರೋಪಿ ಸೆರೆ
ಬಂಟ್ವಾಳ: ಸಜಿಪನಡು ಗ್ರಾಮದ ಜಂಕ್ಷನ್ ಎಂಬಲ್ಲಿ ಗಾಂಜಾ ಸೇವಿಸಿದ ನಶೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಸ್ಥಳೀಯ ನಿವಾಸಿ ಮೊಹಮ್ಮದ್ ಜಾಫರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.