ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಸಂಘಟನೆ ವತಿಯಿಂದ ಸೋಮವಾರ ಸಂಜೆ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಎಸ್.ಭಟ್ ಮಾತನಾಡಿದರು. ಉಡುಪಿ ವಿಭಾಗೀಯ ಅಧ್ಯಕ್ಷ ಲೋಕೇಶ ಶೆಟ್ಟಿ ಮತ್ತಿತರರು ಇದ್ದಾರೆ.13btl-LIC

ಕಳೆದ ೨೦೦೩ರಲ್ಲಿ ಕೇರಳದ ತಿರುವನಂತಪುರದಲ್ಲಿ ಆರಂಭಗೊಂಡ ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಸಂಘಟನೆ ೧೯ ವರ್ಷಗಳಿಂದ ವಿಮಾ ಪ್ರತಿನಿಧಿಗಳು ಮತ್ತು ಗ್ರಾಹಕರ ಹಿತರಕ್ಷಣೆ ಜೊತೆಗೆ ಸಂಸ್ಥೆಯ ಬೆಳವಣಿಗೆಯಲ್ಲಿ ವಿವಿಧ ಹೋರಾಟಗಳ ಮೂಲಕ ಅವಿರತ ಶ್ರಮಿಸಿದೆ. ಈ ಬಾರಿ ೬ನೇ ರಾಜ್ಯ ಸಮ್ಮೇಳನವು ಜು.೬ ಮತ್ತು ೭ರಂದು ಬೆಳ್ತಂಗಡಿ ಸಂತೆಕಟ್ಟೆ ಎಸ್ ಡಿ ಎಂ ಕಲಾ ಭವನದಲ್ಲಿ ನಡೆಯಲಿದೆ ಎಂದು ಸಂಘದ ಉಡುಪಿ ವಿಭಾಗೀಯ ಅಧ್ಯಕ್ಷ ಎ.ಎಸ್.ಲೋಕೇಶ್ ಶೆಟ್ಟಿ ಹೇಳಿದ್ದಾರೆ.

ಬಿ.ಸಿ.ರೋಡು ಎಲ್ಲೈಸಿ ಶಾಖೆಯಲ್ಲಿ ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಸಂಘಟನೆ ವತಿಯಿಂದ ಸೋಮವಾರ ಸಂಜೆ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಬಂಟ್ವಾಳ ಎಲ್ಲೈಸಿ ಹಿರಿಯ ಶಾಖಾಧಿಕಾರಿ ನಾರಾಯಣ ಗೌಡ, ಸಹಾಯಕ ಶಾಖಾಧಿಕಾರಿ ಸುಂದರ ಮೇರ, ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಶುಭ ಹಾರೈಸಿದರು. ಈ ಸಮ್ಮೇಳನದಲ್ಲಿ ವಿವಿಧ ಜಿಲ್ಲೆಯ ಸಾವಿರಕ್ಕೂ ಮಿಕ್ಕಿ ಮಂದಿ ಆಯ್ದ ಪ್ರತಿನಿಧಿಗಳು ಭಾಗವಹಿಸಲಿದ್ದು, ಹಲವು ಮಹತ್ವದ ನಿರ್ಣಯ ಕೈಗೊಳ್ಳಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಎಂ.ಎಸ್.ಭಟ್ ತಿಳಿಸಿದರು. ಸಮಿತಿ ಪ್ರಧಾನ ಸಂಚಾಲಕ ಪ್ರಕಾಶ್ ಕುಮಾರ್ ಪುತ್ತೂರು, ಉಪಾಧ್ಯಕ್ಷ ಶಂಕರಲಿಂಗಂ ಸುಳ್ಯ, ಸಂಚಾಲಕ ವಿನ್ಸೆಂಟ್ ಡಿಸೋಜ ಬೆಳ್ತಂಗಡಿ, ಸಹ ಸಂಚಾಲಕ ಕೆ.ಪಿ.ದಯಾನಂದ ಶೆಟ್ಟಿ ಮಾಹಿತಿ ನೀಡಿದರು.

ಬಂಟ್ವಾಳ ಘಟಕ ಅಧ್ಯಕ್ಷ ಪ್ರಶಾಂತ ಕೊಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹ ಸಂಚಾಲಕ ಕರುಣಾಕರ ನಾಯಕ್ ಬೆಳ್ತಂಗಡಿ, ಜಂಟಿ ಕಾರ್ಯದರ್ಶಿ ರೋಹಿದಾಸ್ ಕುಂದರ್ ಬಂಟ್ವಾಳ, ಮಾಧ್ಯಮ ಸಂಚಾಲಕ ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತಿತರರು ಇದ್ದರು. ಸಮಿತಿ ಸದಸ್ಯರಾದ ನವೀನ್ ಕೊಡ್ಮಾಣ್ ಸ್ವಾಗತಿಸಿ, ನಾರಾಯಣ ಅಮೀನ್ ವಂದಿಸಿದರು.

By Suddi9

Leave a Reply

Your email address will not be published. Required fields are marked *