ಬಂಟ್ವಾಳ: ಶ್ರೀ ಭೈರವ ಸಂಘದಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಬಂಟ್ವಾಳ: ತಾಲ್ಲೂಕಿನ ಮೊಡಂಕಾಪು ಸಮೀಪದ ಪರಾರಿ ಶ್ರೀ ಭೈರವ ಸಂಘದ ವತಿಯಿಂದ ಸಾಧಕ ವಿದ್ಯಾರ್ಥಿಗಳನ್ನು ಭಾನುವಾರ ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಟ ಅಂಕಗಳಿಸಿದ ಪರಾರಿ ಪರಿಸರದ ಸಾಧಕ ವಿದ್ಯಾರ್ಥಿನಿ ಭೂಮಿಕಾ ಮತ್ತು ಶ್ರೇಯಸ್ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದು ಸಂಘದ ಗೌರವಾಧ್ಯಕ್ಷ, ಪುರಸಭಾ ಸದಸ್ಯ ಪಿ.ರಾಮಕೃಷ್ಣ ಆಳ್ವ ಹೇಳಿದ್ದಾರೆ.
ಇಲ್ಲಿನ ಮೊಡಂಕಾಪು ಸಮೀಪದ ಪರಾರಿ ಶ್ರೀ ಭೈರವ ಸಂಘದ ವತಿಯಿಂದ ಸಾಧಕ ವಿದ್ಯಾರ್ಥಿಗಳನ್ನು ಜೂ.05ರಂದು ಭಾನುವಾರ ಸನ್ಮಾನಿಸಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷ ರಾಜೇಶ್, ಕಾರ್ಯದರ್ಶಿ ಗಣೇಶ್ ಶುಭ ಹಾರೈಸಿದರು. ಪ್ರಮುಖರಾದ ಮನೋಹರ ಶೆಟ್ಟಿ, ವೇದನಾಥ ಶೆಟ್ಟಿ, ನಾಗೇಶ ಕಿರೋಡಿಯನ್, ಜೇಸಿ ಉಮೇಶ ಮೂಲ್ಯ, ಅವಿಲ್ ಮೊಡಂಕಾಪು ಇದ್ದರು.