ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ದ.ಕ ಜಿಲ್ಲಾ ಖಾಸಗಿ ಬಸ್ಸುಗಳಲ್ಲಿ ಪ್ರಯಾಣದರ ಇಳಿಸುವಂತೆ ಆಗ್ರಹಿಸಿ ಜಿಲ್ಲಾದಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ದೇಶದಲ್ಲಿ ಶ್ರೀ ನರೇಂದ್ರ ಮೋದಿಜೀ ನೇತೃತ್ವದ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಡೀಸಿಲ್ ಸೇರಿದಂತೆ ಪೆಟ್ರೋಲ್ ಉತ್ಪನ್ನಗಳ ಬೆಲೆಯಲ್ಲಿ ಗಮನಾರ್ಹವಾದ ಇಳಿಕೆ ಕಂಡಿದ್ದು ಬೆಲೆ ಏರಿಕೆಯ ಬವಣೆಯಿಂದ ಬಸವಳಿದಿದ್ದ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ. 2014ರ ಆಗಸ್ಟ್ ತಿಂಗಳಿನಿಂದ ಈ ದಿನದ ವರೆಗೆ ಪ್ರತಿ ಲೀ. ಡೀಸಿಲ್ ಬೆಲೆಯಲ್ಲಿ ರೂ. 6.00ರ ಇಳಿಕೆಯಾಗಿದೆ.

ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಗೂ ಖಾಸಗಿ ಬಸ್ಸುಗಳನ್ನೇ ತಮ್ಮ ದಿನನಿತ್ಯದ ಸಂಚಾರಕ್ಕಾಗಿ ಅವಲಂಬಿಸಿರುವ ವಿದ್ಯಾರ್ಥಿ ಸಮೂಹ ಹಾಗೂ ಜನ ಸಾಮಾನ್ಯರು ಡೀಸಿಲ್ ಬೆಲೆಯಲ್ಲಾಗಿರುವ ಇಳಿಕೆ ಲಾಭವನ್ನು ಪಡೆಯದೆ ಈ ಹಿಂದಿನ ದುಬಾರಿ ಪ್ರಯಾಣದರವನ್ನು ನೀಡಿ ಸಂಚರಿಸುವಂತಾಗಿದೆ. ಡೀಸಿಲ್ ಬೆಲೆಯಲ್ಲಾಗಿರುವ ಇಳಿಕೆಯ ಲಾಭವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಗೂ ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಸುವವರಿಗೆ ತಲುಪಿಸುವಲ್ಲಿ ಸಾರಿಗೆ ಇಲಾಖೆಯ ಯಾವುದೆ ಪ್ರಯತ್ನ ಕಂಡುಬರುತ್ತಿಲ್ಲ ಹಾಗೂ ಈ ವಿಚಾರದ ಬಗೆಗಿನ ಜನರ ನ್ಯಾಯಯುತ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಸಾರಿಗೆ ಸಚಿವ ಶ್ರೀ ರಾಮಲಿಂಗ ರೆಡ್ಡಿಯವರ ಹೇಳಿಕೆ ಖಂಡನಾರ್ಹವಾಗಿದೆ.
ಕಳೆದ ಹಲವು ವರ್ಷಗಳಿಂದ ಬೆಲೆ ಏರಿಕೆಯ ತಾಪಕ್ಕೆ ಬಲಿಯಾಗಿರುವ ಕರ್ನಾಟಕದ ಶ್ರೀ ಸಾಮಾನ್ಯನ ನೋವನ್ನು ಅರ್ಥಮಾಡಿಕೊಳ್ಳುವಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು ಶೀಘ್ರದಲ್ಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಗೂ ಖಾಸಗಿ ಬಸ್ಸುಗಳ ಪ್ರಯಾಣ, ಮಾಸಿಕ ಪಾಸ್ ಹಾಗೂ ವಿದ್ಯಾರ್ಥಿ ಪಾಸ್ ದರವನ್ನು ಕಡಿತ ಮಾಡಿ ಜನರ ಬವಣೆಯನ್ನು ನಿವಾರಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ದ.ಕ ಖಾಸಗಿ ಬಸ್ಸು ಸಂಘಗಳನ್ನು ಬಿಜೆಪಿ ಯುವಮೋರ್ಚ ದ.ಕ ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ.
ಅಧ್ಯಕ್ಷ ಪ್ರಥ್ವಿರಾಜ್ ಯು.ಬಿ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ ಮನವಿಯನ್ನು ಜಿಲ್ಲಾದಿಕಾರಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಅಶೋಕ್, ಗುರುಚರಣ್, ಸಂದೀಪ್ ಶೆಟ್ಟಿ, ಸುಜಿತ್ ಪ್ರತಾಪ್, ರಕ್ಷಿತ್ ಕೊಟ್ಟರಿ ಉಪಸ್ಥಿತರಿದ್ದರು.
