ಕೈಕಂಬ : ನಸುಕಿನ ವೇಳೆ ಚಲಾಯಿಸಿಕೊಂಡು ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ತಂದೆ – ಮಗಳು ಬಲಿಯಾದ ಘಟನೆ ನಗರದ ಹೊರವಲಯದಲ್ಲಿರುವ ಗಂಜಿಮಠದ ಸೂರಲ್ಪಾಡಿಯಲ್ಲಿ ನಡೆದಿದೆ.IMG_20220604_180119

ಶಿವಮೊಗ್ಗ ಜಿಲ್ಲೆಯ ರಾಣಿಬೆನ್ನೂರು ನಿವಾಸಿ ಪುಂಡಲೀಕಪ್ಪ(62), ಅವರ ಪುತ್ರಿ ಅಶ್ವಿನಿ(29) ಮೃತಪಟ್ಟ ದುರ್ದೈವಿಗಳು.

ಪುಂಡಲೀಕಪ್ಪನವರು ಅನಾರೋಗ್ಯ ಪೀಡಿತರಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕಾರಿನಲ್ಲಿ ಕರೆತರಲಾಗುತ್ತಿತ್ತು. ಕುಟುಂಬ ಸಮೇತ ಜೂನ್ 2ರಂದು ರಾತ್ರಿ ಹೊರಡಿದ್ದಾರೆ. ನಸುಕಿನ ಜಾವ ಕಾರು ಮೂಡುಬಿದಿರೆ ಮೂಲಕ ಮಂಗಳೂರಿಗೆ ಬರುತ್ತಿದ್ದರು. ಈ ವೇಳೆ ಗಂಜಿಮಠ ಸೂರಲ್ಪಾಡಿ ಬಳಿ ಬರುತ್ತಿದ್ದರು. ಈ ವೇಳೆ ಕಾರು ಬೀದಿಬದಿಯಲ್ಲಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಅಶ್ವಿನಿಯವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತೀವ್ರವಾಗಿ ಗಾಯಗೊಂಡ ಪುಂಡಲೀಕ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಉಳಿದಂತೆ ಅಶ್ವಿಯ ಪತಿ ಸಂತೋಷ್, ಪುತ್ರಿ ಶ್ರೇಯಾ, ತಾಯಿ ಪುಷ್ಪಾ ಕಾರು ಚಾಲಕ ಸುಹೈಲ್ ಗಾಯಗೊಂಡಿದ್ದಾರೆ. ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿಕೊಂಡು ಬಂದಿರೋದೇ ಈ ಅಪಘಾತ ಕಾರಣ ಎಂದು ಹೇಳಲಾಗುತ್ತಿದೆ.

By suddi9

Leave a Reply

Your email address will not be published. Required fields are marked *