ಬಂಟ್ವಾಳ: ಬೆಂಜನಪದವು ಸಮೀಪದ ಶಾಂತಿನಗರ ನಿವಾಸಿ, ಹಿಂದುಳಿದ ತೀಯಾ ಸಮಾಜದ ಹಿರಿಯ ಮುಖಂಡ ಗೋಪಾಲ ಬೆಳ್ಚಡ ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ಜೂ.02ರಂದು ಗುರುವಾರ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.2btl-Gopala Belchada

ಕಳೆದ ಎರಡು ದಶಕಗಳಿಂದ ಹೋಟೆಲ್ ವ್ಯವಹಾರ ನಡೆಸುತ್ತಿದ್ದ ಇವರು ಉಳ್ಳಾಲ ಭಗವತಿ ಕ್ಷೇತ್ರದ ಆಡಳಿತ ಸಮಿತಿ ಸದಸ್ಯರಾಗಿ, ಬೆಂಜನಪದವು ಭದ್ರಕಾಳಿ ದೇವಸ್ಥಾನದ ಮೊಕ್ತೇಸರರಾಗಿ, ಪೊಳಲಿ ಚೀರುಂಭ ಭಗವತಿ ತೀಯ ಸಮಾಜ ಸೇವಾ ಸಮಿತಿ ಮಾರ್ಗದರ್ಶಕರಾಗಿ, ಅಡ್ಡೂರು ನಂದ್ಯ ಕ್ಷೇತ್ರದ ತೀಯಾ ಸಮಾಜ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದರು.

By suddi9

Leave a Reply

Your email address will not be published. Required fields are marked *