ಬಂಟ್ವಾಳ : ತರಕಾರಿ ಮತ್ತು ಹೂವುಗಳ ಕೃಷಿ ಚಟುವಟಿಕೆ ಬಗ್ಗೆ ಮಾಹಿತಿ ಪಡೆಯಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಲ್ಕೆಮಾರ್ ಇಲ್ಲಿನ ವಿದ್ಯಾರ್ಥಿಗಳು ಬಿ.ಸಿ.ರೋಡಿನ ಸೂರ್ಯವಂಶ ಕಟ್ಟಡದಲ್ಲಿರುವ ಪ್ರೊ. ಗೋವರ್ಧನ್ ರಾವ್‌ರವರ ನಾಲ್ಕನೇ ಮಹಡಿಯಲ್ಲಿರುವ ಟಾರೀಸ್ ಮೇಲೆ ಇರುವ ಕೃಷಿ ತೋಟಕ್ಕೆ ಶನಿವಾರ ಭೇಟಿ ನೀಡಿದರು.WhatsApp Image 2022-05-31 at 2.00.39 PM (1)  WhatsApp Image 2022-05-31 at 2.00.40 PM

ಸಾವಯವ ಗೊಬ್ಬರ ತಯಾರಿಸುವ ವಿಧಾನ, ಗಿಡಗಳ ಪೋಷಣೆ, ವಿವಿಧ ಬಗೆಯ ತರಕಾರಿ ಗಿಡ ಹಾಗೂ ಹೂವುಗಳ ಬೆಳೆಸುವಿಕೆ, ಟಾರೀಸ್ ಮೇಲೆ ಕೃಷಿ ಮಾಡುವ ವಿಧಾನ ಬಗ್ಗೆ ಮಾಹಿತಿ ನೀಡಿದರು. ವಾಣಿಜ್ಯ ಸಂಕಿರ್ಣದ ೪ನೇ ಮಹಡಿಯಲ್ಲಿ ಸುಮಾರು ನಾಲ್ಕು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಬೆಳೆಸಿದ ವಿವಿಧ ಬಗೆಯ ತರಕಾರಿ ಗಿಡಗಳಾದ ಟೊಮ್ಯಾಟೋ, ಹೀರೇಕಾಯಿ, ಅಲಸಂಡೆ, ಅರಿವೆ, ಗೆಣಸು, ಬದನೆ, ಚೆಂಡು ಹೂ, ಗುಲಾಬಿ, ಸೀತಾಫಲ, ನೆಲ್ಲಿಕಾಯಿ, ಲಿಂಬೆ, ಜಂಬುನೇರಳೆ, ಪೇರಳೆ, ಬುಗರಿ ಹಣ್ಣು, ಹೀಗೆ ಹಲವಾರು ಗಿಡಗಳನ್ನು ಮಕ್ಕಳು ವೀಕ್ಷಿಸಿದರು. ಈ ಸಂದರ್ಭ ಶಾಲಾ ಶಿಕ್ಷಕಿ ರೇಝಾ ರಾವ್ ಮತ್ತು ಶಿಕ್ಷಕಿ ಶಶಿಕಲಾ ಉಪಸ್ಥಿತರಿದ್ದರು.WhatsApp Image 2022-05-31 at 2.00.40 PM (1) WhatsApp Image 2022-05-31 at 2.00.39 PM

By Suddi9

Leave a Reply

Your email address will not be published. Required fields are marked *