ಬಂಟ್ವಾಳ: ಇಲ್ಲಿನ ಬಂಟ್ವಾಳ ಮತ್ತು ಪಾಣೆಮಂಗಳೂರು ಹಾಗೂ ವಿಟ್ಲ ಹೋಬಳಿ ರೈತ ಕೇಂದ್ರಕ್ಕೆ ಸರ್ಕಾರದಿಂದ ಭದ್ರ, ಜಯ ಮತ್ತು ಜ್ಯೋತಿ ತಳಿ ಭತ್ತದ ಬೀಜ ಪೂರೈಕೆಯಾಗಿದೆ. ಆಸಕ್ತ ರೈತರು ಪಹಣಿಪತ್ರ ಮತ್ತು ಬ್ಯಾಂಕ್ ಪಾಸ್ ಬುಕ್ ಸಹಿತ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ ಸಹಾಯಧನ ಸಹಿತ ಬಿತ್ತನೆ ಭತ್ತದ ಬೀಜ ಪಡೆಯಬಹುದು ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.
