ಕೈಕಂಬ: ಮದುವೆಯ ದಿಬ್ಬಣ ಬರುತ್ತಿದ್ದ ಬಸ್ಸನ್ನು ಟೆಂಪೋ ಚಾಲಕರು ತಡೆದು, ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಗುರುಪುರ ಕೈಕಂಬದಲ್ಲಿ ಇಂದು 11ರ ಸುಮಾರಿಗೆ ನಡೆದಿದೆ.
ಘಟನೆಯ ವಿವರ: ಕೈಕಂಬದದಲ್ಲಿ ಹಾಲ್ ಒಂದರಲ್ಲಿ ಮದುವೆ ನಡೆಯಲಿದ್ದ ಕಾರಣ 3 ನಂಬರಿನ ಪೆರ್ಮಂಕಿಯಿಂದ ಮಂಗಳೂರಿಗೆ ಹೋಗು ಸಿಟಿ ಬಸ್ ಗುರುಪುರ ಕೈಕಂಬಕ್ಕೆ ದಿಬ್ಬಣ ಕರೆದುಕೊಂಡು ಬರುತ್ತಿದ್ದಂತೆ ಟೆಂಪೋ ಚಾಲಕರು ಬಸ್ಸನ್ನು ತಡೆದುನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದರು.

ಚಾಲಕ ಹಾಗೂ ನಿರ್ವಾಹಕನನ್ನು ತಡೆದ ಟೆಂಪೋ ಚಾಲಕ-ಮಾಲಕರು ನಾವು ಬಾಡಿಗೆ ಇಲ್ಲದೆ ಇರುವ ಕೂತಿದ್ದೇವೆ, ಯಾವುದೇ ಮದುವೆ ದಿಬ್ಬಣ ಅಥವಾ ಪ್ರವಾಸಕ್ಕೆ ತೆರಳಬೇಕಾದರೆ ಟೇಪೋವನ್ನು ಉಪಯೋಗಿಸಬೇಕೆಂದು ಸಂಬಂಧಪಟ್ಟವರಿಗೆ ಈಗಾಗಲೇ ತಿಳಿಸಿದ್ದೇವೆ ಎಂದು ಹೇಳಿದ ಟೆಂಪೋಚಾಲಕರು ಬಸ್ ತಡೆದರು. ಕೊನೆಗೆ ದಿಬ್ಬಣದಲ್ಲಿ ಬಂದಿದ್ದ ಜನರು ನಡೆದುಕೊಂಡೇ ಮದುವೆ ಹಾಲ್ಗೆ ತೆರಳಬೇಕಾಯ್ತು.
ಪ್ರವಾಸಕ್ಕೆ ಅಥವಾ ಮದುವೆಗೆ ತೆರಳುವಾಗ ಟೆಂಪೋಗಳನ್ನೇ ಉಪಯೋಗಿಸಬೇಕು, ಬಸ್ ಉಪಯೋಗಿಸಿದರೆ ಟೆಂಪೋ ಮಾಲಕರಿಗೆ ನಷ್ಟ ಉಂಟಾಗುತ್ತದೆ. ಈ ಬಗ್ಗೆ ಈಗಾಗಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಬಸ್ಸನ್ನು ತಡೆದು ನಿಲ್ಲಿಸಲಾಯಿತು ಎಂದು ಟೆಂಪೋ ಚಾಲಕರು ಸುದ್ದಿ9ಗೆ ತಿಳಿಸಿದರು.
ಕೈಕಂಬದಲ್ಲಿ ಈಗಾಗಲೇ ಹಲವಾರು ಟೆಂಪೋ ಚಾಲಕ-ಮಾಲಕರು ಬಾಡಿಗೆ ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ಇದೇ ವೇಳೆ ಸವರ್ಿಸ್ ಬಸ್, ಸಿಟಿ ಬಸ್ ಅಥವಾ ಎಕ್ಸ್ಪ್ರೆಸ್ ಬಸ್ನವರು ಪ್ರವಾಸಕ್ಕೆ ತೆರಳುವುದರಿಂದ ಟೆಂಪೋಚಾಲಕರಿಗೆ ಬಾಡಿಗೆ ಸಿಗುವುದಿಲ್ಲ ಎಂಬುದು ಟೆಂಪೋ ಚಾಲಕರ ಆರೋಪವಾಗಿದೆ. ಈ ಬಗ್ಗೆ ಟೆಂಪೋಚಾಲಕರು ಮೊದಲೇ ಬಜ್ಪೆ ಠಾಣೆಗೆ ದೂರು ನೀಡಿದ್ದೇವೆ ಎಂದು ತಿಳಿಸಿದ್ದಾರೆ.



