ಬಂಟ್ವಾಳ: ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ದಾಂತ ಆದರ್ಶಗಳನ್ನು ಮಕ್ಕಳ ವಿದ್ಯಾರ್ಥಿ ಜೀವನದಿಂದ ಮೈಗೂಡಿಸುವ ಉದ್ದೇಶದಿಂದ ಎಸ್.ಎಸ್.ಎಲ್.ಸಿ ಸಾಮಾನ್ಯವಿಜ್ಞಾನ ಪಠ್ಯಪುಸ್ತಕದಲ್ಲಿ ಆಳವಡಿಸಲಾಗಿತ್ತು, ಗುರುಗಳ ಸಂದೇಶ ಶೋಷಿತ ವರ್ಗಕ್ಕೆ ಹಾಗೂ ನಿಶಕ್ತರಿಗೆ ದಾರಿದೀಪವಾಗಿತ್ತು ಇದನ್ನು ಸಹಿಸದವರು ಗುರುಗಳ ಸಂದೇಶವನ್ನು ಮುಚ್ಚಿ ಹಾಕಲು ಪ್ರಯತ್ನಿಸಿರಿವುದು ಅತೀ ಖಂಡನೀಯ.

ವಿದ್ಯಾರ್ಥಿಗಳ ಮನಸ್ಸು ಹಸಿ ಮಣ್ಣಿನಂತಾಗಿದ್ದು ಜಾತಿ-ಜಾತಿಯ ಮದ್ಯೆ ಧರ್ಮ-ಧರ್ಮದ ಮದ್ಯೆ ಬಡವ-ಶ್ರೀಮಂತರ ಮದ್ಯೆ ಇರತಕ್ಕಂತಹ ತಾರತಮ್ಯಗಳನ್ನು ಹೊಗಲಾಡಿಸುವುದೇ ಗುರುಗಳ ಸಂದೇಶವಾಗಿದ್ದು ಅದು ವಿದ್ಯಾರ್ಥಿಗಳ ಮೃದು ಮನಸ್ಸಿನಲ್ಲಿ ಗಟ್ಟಿಯಾಗಿರುವುದೇ ಗುರುಗಳ ಸಂದೇಶವಾಗಿದೆ. ಪಠ್ಯಪುಸ್ತಕದಲ್ಲಿ “ಶ್ರೀ ನಾರಾಯಣ ಗುರುಗಳ ಧರ್ಮ ಪರಿಪಾಲನಾ ಯೋಗಂ” ಶಿರೋನಾಮೆಯನ್ನು ತಿರಸ್ಕರಿಸಿದಲ್ಲಿ ಇಡೀ ಜನ ಸಮುದಾಯ ನಡೆಸುವ ತೀವ್ರ ಹೋರಾಟವನ್ನು ರಾಜ್ಯದ ಬಿಜೆಪಿ ಸರಕಾರ ಎದುರಿಸಬೇಕಾದಿತು ಎಂದು ಎಚ್ಚರಿಸಿದರು.

By Suddi9

Leave a Reply

Your email address will not be published. Required fields are marked *